ಧೋನಿಗೆ ತಲೆಬಾಗಿ ನಮಸ್ಕರಿಸಿದ ರವೀಂದ್ರ ಜಡೇಜಾ

ಶುಕ್ರವಾರ, 22 ಏಪ್ರಿಲ್ 2022 (09:40 IST)
ಮುಂಬೈ: ಐಪಿಎಲ್ 2022 ರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್ ಕೆ ತಂಡಕ್ಕೆ ರೋಚಕ ಜಯ ತಂದುಕೊಟ್ಟ ಧೋನಿಗೆ ನಾಯಕ ರವೀಂದ್ರ ಜಡೇಜಾ ತಲೆ ಬಾಗಿ ನಮಸ್ಕರಿಸಿದ್ದಾರೆ.

ಬೆಸ್ಟ್ ಫಿನಿಶರ್ ಎಂಬ ಖ್ಯಾತಿಗೆ ತಕ್ಕಂತೆ ಆಡಿದ ಧೋನಿ 13 ಎಸೆತಗಳಿಂದ 28 ರನ್ ಗಳಿಸಿ ತಂಡಕ್ಕೆ ಗೆಲುವು ಕೊಡಿಸಿದ್ದರು. ಈ ಗೆಲುವಿನ ಬಳಿಕ ಮೈದಾನಕ್ಕೆ ಎದುರಾಳಿಗಳ ಕೈಕುಲುಕಲು ಬಂದಾಗ ರವೀಂದ್ರ ಜಡೇಜಾ ಹ್ಯಾಟ್ ತೆಗೆದು ತಲೆ ಬಾಗಿ ತಮ್ಮದೇ ಶೈಲಿಯಲ್ಲಿ ನಮಸ್ಕರಿಸಿ ಧೋನಿ ಮೇಲೆ ಅಭಿಮಾನ ಮೆರೆದಿದ್ದಾರೆ.

ಬಳಿಕ ಮಾತನಾಡಿದ್ದ ಜಡೇಜಾ ಧೋನಿ ಇರುವವರೆಗೆ ನನಗೆ ಸೋಲಿನ ಚಿಂತೆಯಿರಲಿಲ್ಲ ಎಂದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ