ಅಂಪಾಯರ್ ಪ್ರಮಾದ: ಸಿಟ್ಟಿಗೆದ್ದು ಬ್ಯಾಟಿಗರನ್ನು ಪೆವಿಲಿಯನ್ ಗೆ ಕರೆದ ರಿಷಬ್ ಪಂತ್
ಕೊನೆಯ ಓವರ್ ನಲ್ಲಿ ಡೆಲ್ಲಿಗೆ ಗೆಲ್ಲಬೇಕಾದರೆ ಆರು ಎಸೆತಗಳಿಂದ ಆರು ಸಿಕ್ಸರ್ ಬೇಕಾಗಿತ್ತು. ಅದರಂತೇ ರೋವ್ಮಾನ್ ಪೊವೆಲ್ ಸಿಕ್ಸರ್ ಸಿಡಿಸುತ್ತಿದ್ದರು. ಆದರೆ ಮೂರನೇ ಎಸೆತ ಸೊಂಟಕ್ಕಿಂತ ಎತ್ತರದಲ್ಲಿ ಹಾರಿ ನೋ ಬಾಲ್ ಆಗಿತ್ತು. ಆದರೆ ಅಂಪಾಯರ್ ನೋ ಬಾಲ್ ನೀಡಲಿಲ್ಲ. ಡಗ್ ಔಟ್ ನಲ್ಲಿದ್ದ ಆಟಗಾರರು ಸಿಗ್ನಲ್ ನೀಡಿದರೂ ಥರ್ಡ್ ಅಂಪಾಯರ್ ಗೆ ಪರಿಶೀಲಿಸಲೂ ಆಸಕ್ತಿ ತೋರಲಿಲ್ಲ.
ಇದರಿಂದ ಸಿಟ್ಟಿಗೆದ್ದ ಪಂತ್ ತಮ್ಮ ತಂಡದ ಬ್ಯಾಟಿಗರನ್ನು ಮೈದಾನದಿಂದ ವಾಪಸ್ ಬರಲು ಸೂಚನೆ ಕೊಟ್ಟರು. ಆದರೆ ಕೆಲವು ಹೊತ್ತು ಯೋಚಿಸಿದ ಬ್ಯಾಟಿಗರು ಮತ್ತೆ ಪಂದ್ಯದಲ್ಲಿ ಮುಂದುವರಿಯಲು ನಿರ್ಧರಿಸಿದರು. ಬಳಿಕ ಡೆಲ್ಲಿ ಸೋತಿತು. ಪಂದ್ಯದ ಬಳಿಕ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ ಕೂಡಾ ಈ ಬಗ್ಗೆ ಅಸಮಾಧಾನ ಹೊರಹಾಕಿದರು.