ಫ್ರೆಂಚ್ ಓಪನ್: ಪುರುಷರ ಡಬಲ್ಸ್ ನಲ್ಲಿ ಸೆಮಿಫೈನಲ್ ತಲುಪಿದ ರೋಹನ್ ಬೋಪಣ್ಣ ಜೋಡಿ
42 ವರ್ಷದ ಬೋಪಣ್ಣ ಕಳೆದ 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್ ಗೇರಿದ ಸಾಧನೆ ಮಾಡಿದ್ದಾರೆ. ಬ್ರಿಟಿಷ್-ಫಿನ್ನಿಶ್ ಜೋಡಿ ಗ್ಲಾಸ್ ಪೂಲ್ ಮತ್ತು ಹೆನ್ರಿ ಹೆಲಿವಾರ ವಿರುದ್ಧ 4-6, 6-4, 7-6 (3) ಅಂತರಗಳ ಗೆಲುವು ಕಂಡಿದ್ದಾರೆ. ಎರಡು ಗಂಟೆಗಳ ಕಾಲ ನಡೆದ ರೋಚಕ ಹಣಾಹಣಿಯಲ್ಲಿ ಬೋಪಣ್ಣ ಜೋಡಿ ಗೆಲುವು ಕಂಡಿತು.
ಇನ್ನು, ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಇಂದು ವಿಶ್ವದ ಶ್ರೇಷ್ಠ ಟೆನಿಸಿಗರಾದ ಜೊಕೊವಿಕ್ ಮತ್ತು ನಡಾಲ್ ನಡುವೆ ಕ್ವಾರ್ಟರ್ ಫೈನಲ್ ನಡೆಯಲಿದೆ.