ಐಪಿಎಲ್ ಬಿಡ್ಡಿಂಗ್ ನಲ್ಲಿ ಹರಾಜಾದ ಟಾಪ್ 5 ಆಟಗಾರರು

ಮಂಗಳವಾರ, 21 ಫೆಬ್ರವರಿ 2017 (10:06 IST)
ಬೆಂಗಳೂರು:  ಈ ಬಾರಿಯ ಐಪಿಎಲ್ ಬಿಡ್ಡಿಂಗ್ ಹಲವು ದಾಖಲೆಗಳಿಗೂ ಪಾತ್ರವಾಯಿತು. ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತ ಜೇಬಿಗಳಿಸಿಕೊಂಡ ವಿದೇಶಿ ಆಟಗಾರನೆಂಬ ಖ್ಯಾತಿಗೆ ಪಾತ್ರರಾದರು. ಟಾಪ್ 5 ಆಟಗಾರರು ಯಾರೆಲ್ಲಾ ನೋಡೋಣ.

 
ಬೆನ್ ಸ್ಟೋಕ್ಸ್
ಇಂಗ್ಲೆಂಡ್ ನ ಆಲ್ ರೌಂಡರ್ ಸ್ಟೋಕ್ಸ್ ಮೇಲೆ ಹಲವು ತಂಡಗಳು ಕಣ್ಣಿಟ್ಟಿದ್ದವು. ಅಂತಿಮವಾಗಿ 14.5 ಕೋಟಿ ರೂಪಾಯಿ ಮೊತ್ತಕ್ಕೆ ಸ್ಟೋಕ್ಸ್ ಪುಣೆ ಸೂಪರ್ ಜೈಂಟ್ಸ್ ತಂಡದ ಪಾಲಾದರು. ಭಾರತದ ವಿರುದ್ಧ ನಡೆದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕೆ ಸ್ಟೋಕ್ಸ್ ಐಪಿಎಲ್ ನ ನೆಚ್ಚಿನ ತಾರೆಯಾಗಿದ್ದರು.

ಟೈಮಲ್ ಮಿಲ್ಸ್

ಇಂಗ್ಲೆಂಡ್ ನ ವೇಗಿ ಮಿಲ್ಸ್ 12 ಕೋಟಿ ರೂ. ಮೊತ್ತಕ್ಕೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪಾಲಾದರು. ಮಿಲ್ಸ್ ಅತೀ ವೇಗವಾಗಿ ಚೆಂಡು ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಫಿಟ್ ನೆಸ್ ಸಮಸ್ಯೆ ಆಗಾಗ ಕಾಡುತ್ತದೆ ಎನ್ನುವುದೇ ಅವರ ವೀಕ್ ನೆಸ್.

ಟೆಂಟ್ ಬೌಲ್ಟ್

ಇಂಗ್ಲೆಂಡ್ ನ ಮತ್ತೊಬ್ಬ ವೇಗಿ ಟೆಂಟ್ ಬೌಲ್ಟ್ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡವನ್ನು 5 ಕೋಟಿ ಮೊತ್ತಕ್ಕೆ ಸೇರಿಕೊಂಡರು. ಎಡಗೈ ವೇಗಿಯ ಮೂಲ ಬೆಲೆ 1.5 ಕೋಟಿ ರೂ. ಇತ್ತು. ರನ್ ನೀಡದೇ ಎದುರಾಳಿಗಳನ್ನು ನಿಯಂತ್ರಿಸುವುದೇ ಇವರ ತಾಕತ್ತು.

ಕಗಿಸೋ ರಬಾಡ

ದ. ಆಫ್ರಿಕಾದ ರಬಾಡ ಮೂಲ ಬೆಲೆ 1 ಕೋಟಿ ರೂ. ಹರಾಜಿನ ಮೂಲಕ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪಾಲಾದ ವೇಗಿ ಜೇಬಿಗಿಳಿಸಿದ್ದು 5 ಕೋಟಿ ರೂ.

ಕೆ. ಗೌತಮ್

ನಮ್ಮ ರಾಜ್ಯದ ಹುಡುಗ ಕೆ. ಗೌತಮ್ ರಣಜಿ ಟ್ರೋಫಿಯಲ್ಲಿ ಮಿಂಚಿದ್ದು ಬಿಟ್ಟರೆ, ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಆದರೂ 2 ಕೋಟಿ ಪಡೆಯಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಪಾಲಾದ ಗೌತಮ್ ಮೂಲ ಬೆಲೆ ಕೇವಲ 10 ಲಕ್ಷ ರೂ. ಇತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ