ಖಾಲಿ ಮೈದಾನದಲ್ಲಿ ಐಪಿಲ್: ವಿರಾಟ್ ಕೊಹ್ಲಿ ಅಭಿಪ್ರಾಯವೇನು ಗೊತ್ತಾ?
ಶನಿವಾರ, 9 ಮೇ 2020 (08:48 IST)
ಮುಂಬೈ: ಈ ಬಾರಿ ಕೊರೋನಾದಿಂದಾಗಿ ಇದುವರೆಗೆ ಐಪಿಎಲ್ ಕ್ರೀಡಾ ಕೂಟ ನಡೆದಿಲ್ಲ. ಕೆಲವರು ಖಾಲಿ ಮೈದಾನದಲ್ಲೂ ಆದರೂ ಸರಿಯೇ ಐಪಿಎಲ್ ನಡೆಯಲಿ ಎನ್ನುತ್ತಿದ್ದಾರೆ. ಈ ಬಗ್ಗೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳುವುದೇನು ಗೊತ್ತಾ?
‘ಈ ರೀತಿ ಕ್ರೀಡಾಕೂಟ ಆಯೋಜಿಸಬಹುದು. ಆದರೆ ಪ್ರೇಕ್ಷಕರ ಎದುರು, ಎಂಜಾಯ್ ಮಾಡುತ್ತಾ, ಪಂದ್ಯದ ಕೌತುಕವನ್ನು ಅನುಭವಿಸುತ್ತಾ ಆಡುವ ಮಜವೇ ಬೇರೆ. ಈ ಭಾವನೆಗಳನ್ನು ಪುನರ್ ಸೃಷ್ಟಿಸಲು ಅಸಾಧ‍್ಯ'’ ಎಂದು ಕೊಹ್ಲಿ ಹೇಳಿದ್ದಾರೆ.
ಕ್ರಿಕೆಟ್ ಆಡಬಹುದು. ಆದರೆ ಪ್ರೇಕ್ಷಕರ ಹರ್ಷೋದ್ಘಾರ, ಚೀತ್ಕಾರ, ಚಿಯರ್ ಅಪ್ ಇಲ್ಲದೇ ಆಡುವುದರಲ್ಲಿ ಯಾವುದೇ ರಸವಿರದು ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.