ಅರ್ಧಶತಕ ಸಿಡಿಸಿ ಬ್ಯಾಟ್‌ ಎತ್ತಿದ ಬೆನ್ನಲ್ಲೆ ಕಕ್ಕಾಬಿಕ್ಕಿಯಾದ ವಿರಾಟ್‌: ಕಾರಣವೇನು ಗೊತ್ತಾ

Sampriya

ಭಾನುವಾರ, 23 ಮಾರ್ಚ್ 2025 (11:05 IST)
Photo Courtesy X
ಕೋಲ್ಕತ್ತಾ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರಾಟ್‌ ಕೊಹ್ಲಿ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ 56ನೇ ಅರ್ಧಶತಕವನ್ನು ದಾಖಲಿಸಿದ್ದಾರೆ. ಶನಿವಾರ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಈಡನ್‌ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಬೌಂಡರಿ ಬಾರಿಸಿ ಅರ್ಧಶತಕ ಪೂರೈಸಿದ ವಿರಾಟ್‌ ಕೊಹ್ಲಿ ಅವರು ಬ್ಯಾಟ್‌ ಎತ್ತುತ್ತಿದ್ದಂತೆ ಅಚ್ಚರಿಯ ಪ್ರಸಂಗ ಎದುರಾಯಿತು. ವಿರಾಟ್‌ ಅಭಿಮಾನಿಯೊಬ್ಬ ರಕ್ಷಣಾ ಬೇಲಿಯನ್ನು ದಾಟಿ, ಓಡಿ ಬಂದು ಕೊಹ್ಲಿ ಅವರ ಕಾಲಿಗೆ ಸಾಷ್ಟಂಗ ನಮಸ್ಕಾರ ಮಾಡಿದ್ಧಾರೆ. ಈ ವೇಳೆ ವಿರಾಟ್‌ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ.

ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿಯನ್ನು ವಿರಾಟ್‌ ಮೇಲೆಳುವಂತೆ ಹೇಳಿದ್ದಾರೆ. ಆಗ ಕೊಹ್ಲಿಯನ್ನು ತಬ್ಬಿಕೊಂಡು ಶುಭಾಶಯ ತಿಳಿಸಿದ್ದಾನೆ. ಈ ವೇಳೆ ಭದ್ರತಾ ಸಿಬ್ಬಂದಿಗಳು ಕ್ರೀಸ್‌ ಹತ್ತಿರಕ್ಕೆ ಬಂದು ಆತನನ್ನ ವಶಕ್ಕೆ ಪಡೆದಿದ್ದಾರೆ. ಆಗ ಕೊಹ್ಲಿ ಆತನಿಗೆ ಏನೂ ಮಾಡಬೇಡಿ ಎಂದು ಸೂಚನೆ ನೀಡಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿಗಳು ಅಭಿಮಾನಿಯನ್ನು ಮೈದಾನದಿಂದ ಹೊರಗೆ ಕರೆದೊಯ್ದಿದ್ದಾರೆ.

ಈ ಪಂದ್ಯದಲ್ಲಿ ಫಿಲ್‌ ಸಾಲ್ಟ್‌(56) ಮತ್ತು ವಿರಾಟ್‌ ಕೊಹ್ಲಿ(ಅಜೇಯ 59) ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 7 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ವಿರಾಟ್ ಕೊಹ್ಲಿ ಅವರು 38 ರನ್‌ಗಳಿಸಿದ್ದಾಗ ಐಪಿಎಲ್ ಇತಿಹಾಸದಲ್ಲಿ ಕೆಕೆಆರ್ ವಿರುದ್ಧ 1000 ರನ್ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ