ಆರು ತಂಡಗಳನ್ನೊಳಗೊಂಡ ಮಹಿಳಾ ಐಪಿಎಲ್ ಮುಂದಿನ ವರ್ಷದಿಂದ
ಇದಕ್ಕೆ ಬಿಸಿಸಿಐ ಸಿದ್ಧತೆ ಆರಂಭಿಸಿದೆ. ಕಳೆದ ತಿಂಗಳು ನಡೆದ ಬಿಸಿಸಿಐ ಸಭೆಯಲ್ಲಿ ಮಹಿಳಾ ಐಪಿಎಲ್ ಬಗ್ಗೆ ಚರ್ಚಿಸಲಾಗಿತ್ತು.
ಮಾರ್ಚ್ ಬಳಿಕ ಪುರುಷರ ಐಪಿಎಲ್ ಕೂಡಾ ಇರುವುದರಿಂದ ಮಹಿಳೆಯರ ಐಪಿಎಲ್ ಆಯೋಜಿಸುವುದು ಯಾವಾಗ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿದೆ. ಸದ್ಯಕ್ಕೆ ಆರು ತಂಡಗಳ ಐಪಿಎಲ್ ನಡೆಸುವ ಉದ್ದೇಶವಿದೆ. ಮುಂದೆ ಬೇಡಿಕೆ ನೋಡಿಕೊಂಡು ತಂಡಗಳ ಸಂಖ್ಯೆ ಹೆಚ್ಚಾದರೂ ಅಚ್ಚರಿಯಿಲ್ಲ ಎಂದು ಬಿಸಿಸಿಐ ಮೂಲಗಳಿಂದಲೇ ತಿಳಿದುಬಂದಿದೆ.