ಐಪಿಎಲ್ 2022: ಸೋತಿರುವ ಕೆಕೆಆರ್-ರಾಜಸ್ಥಾನ್ ನಡುವೆ ಕಾಳಗ
ಗೆದ್ದು ಅಗ್ರಸ್ಥಾನದಲ್ಲಿದ್ದ ಕೆಕೆಆರ್ ಕಳೆದ ಎರಡು ಪಂದ್ಯಗಳಿಂದ ಸತತವಾಗಿ ಸೋಲುಂಡಿದೆ.ಹೀಗಾಗಿ ಶ್ರೇಯಸ್ ಅಯ್ಯರ್ ಪಡೆಗೆ ಮತ್ತೆ ಅಗ್ರಸ್ಥಾನಕ್ಕೆ ಬರಲು ಗೆಲುವು ಅನಿವಾರ್ಯವಾಗಿದೆ.
ಇತ್ತ ರಾಜಸ್ಥಾನ್ ರಾಯಲ್ಸ್ ಗೆ ಎಲ್ಲಾ ಸರಿ ಇದ್ದರೂ ಅದೃಷ್ಟ ಕೈ ಹಿಡಿಯುತ್ತಿಲ್ಲ. ಈ ಟೂರ್ನಿಯಲ್ಲಿ ಸೋಲು-ಗೆಲುವು ಸಮನಾಗಿ ಬಂದಿದೆ. ಕಳೆದ ಪಂದ್ಯದಲ್ಲಿ ಸೋತಿರುವ ರಾಜಸ್ಥಾನ್ ಈ ಪಂದ್ಯವನ್ನು ಗೆಲ್ಲುವ ತವಕದಲ್ಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.