ಒಂದೇ ಬೋನಿನಲ್ಲಿ ಹುಲಿ,ಕುರಿ

ಮೃಗಾಲಯದಲ್ಲಿ ಹುಲಿ ಮತ್ತು ಕುರಿಯನ್ನು ಒಂದೇ ಬೋನಿನಲ್ಲಿ ಹಾಕಿದ್ದಾರೆ ಎಂಬ ಸುದ್ದಿ ಕೇಳಿ ಗುಂಡ ಮೃಗಾಲಯಕ್ಕೆ ಬಂದು ನೋಡಿದಾಗ ನಿಜವಾಗಲೂ ಕುರಿ ಮತ್ತು ಹುಲಿ ಒಂದೇ ಬೋನಿನಲ್ಲಿತ್ತು.

ಇದು ಹೇಗೆ ಸಾಧ್ಯ ಎಂದು ಗುಂಡ ಆಶ್ಚರ್ಯದಿಂದ ಕೇಳಿದಾಗ, ಕಷ್ಟವೇನು ಇಲ್ಲ. ಕುರಿಯನ್ನು ಮಾತ್ರ ಹತ್ತು ಸಲ ಬದಲಾಯಿಸಲಾಗಿದೆ ಎಂದು ಶಾಂತವಾಗಿ ಉತ್ತರಿಸಿದರು ಮೃಗಾಲಯದ ಅಧಿಕಾರಿಗಳು.

ವೆಬ್ದುನಿಯಾವನ್ನು ಓದಿ