ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!
ಬುಧವಾರ, 12 ಏಪ್ರಿಲ್ 2017 (19:22 IST)
ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ. ಎಲ್ಲೇ ಹೋದರೂ ಏ ಡಿಗ್ರಿ ಇಲ್ಲಿ ಬಾ… ಏ ಡಿಗ್ರಿ ಚಾಕಲೆಟ್ ತೊಗೋ ಎನ್ನುತ್ತಿದ್ದ.
ಗುಂಡನ ಮಾತನ್ನ ಕೇಳಿದ ಜನ ಅಯ್ಯೋ ಗುಂಡ ನಿನಗೆ ಬೇರೆ ಏನೂ ಹೆಸರು ಸಿಗಲಿಲ್ವಾ..? ಇಂತಾ ಮುದ್ದಾದ ಹುಡುಗಿಗೆ ಡಿಗ್ರಿ ಎಂದು ಹೆಸರಿಟ್ಟಿದ್ಯಲ್ಲಾ ಅಂತಾ ಕೇಳಿದ್ರಂತೆ
ಇದಕ್ಕೆ ಗುಂಡ ಕೊಟ್ಟ ಉತ್ತರ ಏನು ಗೊತ್ತಾ..? ಅಯ್ಯೋ ನನ್ನ ಮಗಳನ್ನ ಡಿಗ್ರಿ ತೊಗೊಂಡ್ ಬಾ ಅಂತಾ ಕಾಲೇಜಿಗೆ ಕಳುಹಿಸಿದ್ರೆ ಈ ಮಗು ತೊಗೊಂಡ್ ಬಂದಳು. ಅದಕ್ಕೆ ಈ ಮಗುವಿಗೆ ಡಿಗ್ರಿ ಅಂತಾನೆ ನಾಮಕರಣ ಮಾಡಿದೆ ಎಂದನಂತೆ.