ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

Krishnaveni K

ಶನಿವಾರ, 17 ಫೆಬ್ರವರಿ 2024 (12:22 IST)
ದೈನಂದಿನ ಜಂಜಾಟದಲ್ಲಿ ಒಂದಷ್ಟು ನಕ್ಕರೆ ಮನಸ್ಸೂ ಹಗುರವಾಗುತ್ತದೆ. ಆನೆ ಮತ್ತು ಇರುವೆ ಬಗ್ಗೆ ಎಷ್ಟೋ ತಮಾಷೆ ಕತೆಗಳನ್ನು ಓದಿದ್ದೇವೆ. ಇದೀಗ ನಿಮಗಾಗಿ ಅಂತಹ ಆನೆ ಮತ್ತು ಇರುವೆಯ ನೀವು ಇದುವರೆಗೆ ಓದಿರದ ಸ್ವಾರಸ್ಯಕರ ಕತೆಯನ್ನು ನಿಮಗೆ ಹೇಳುತ್ತೇವೆ. ಓದಿ ನಕ್ಕು ಬಿಡಿ.
ನಾವು ಹೇಳುವ ಈ ಕತೆಯಲ್ಲಿ ಆನೆ ಮತ್ತು ಇರುವೆ ರೂಂ ಮೇಟ್ಸ್ ಆಗಿದ್ದರು. ಇವರಿಬ್ಬರ ನಡುವೆ ಎಷ್ಟೆಲ್ಲಾ ಸಮಸ್ಯೆಗಳು ಬರ್ತಿತ್ತು. ಅದನ್ನು ಅವು ಹೇಗೆ ಬಗೆ ಹರಿಸ್ತಿದ್ದವು ನೋಡಿ.


ಕತೆ-1
ಆನೆ ಒಂದು ದಿನ ಏಳುವಾಗ ತಡವಾಗಿತ್ತು. ಲೇಟ್ ಆಗುತ್ತದೆಂದು ಅದು ಬಾತ್ ರೂಂಗೆ ಹೋಗಿ ಸ್ನಾನ ಮಾಡೋಣ ಎನ್ನುವಷ್ಟರಲ್ಲಿ ಅಲ್ಲಿ ಇರುವೆ ಆಗಲೇ ಸ್ನಾನ ಮಾಡುತ್ತಿತ್ತು. ಆನೆಗೆ ಟೆನ್ಷನೋ ಟೆನ್ಷನ್ ಯಾಕೆ ಅಂತೀರಾ?

ಆನೆ ಹಿಂದಿನ ದಿನ ರಾತ್ರಿ ಸ್ನಾನ ಮಾಡಲು ಹೋಗಿದ್ದಾಗ ಸೋಪ್ ಅಲ್ಲೇ ಬಿಟ್ಟು ಬಂದಿತ್ತು. ಇರುವೆ ಎಲ್ಲಿ ತನ್ನ ಸೋಪ್ ಬಳಸಿ ಖಾಲಿ ಮಾಡುತ್ತೋ ಅಂತ ಆನೆಗೆ ಟೆನ್ಷನ್!

ಕತೆ 2
ಆವತ್ತೂ ಆನೆ ಏಳುವಾಗ ಲೇಟ್ ಆಗಿತ್ತು. ಎದ್ದು ನೋಡಿದರೆ ಇರುವೆ ಆಗಲೇ ಎದ್ದು ಹೊರಗೆ ಹೋಗಿಯಾಗಿತ್ತು. ತನ್ನನ್ನು ಬಿಟ್ಟು ಇರುವೆ ಹೋಗಿದ್ದಕ್ಕೆ ಹಿಡಿಶಾಪ ಹಾಕುತ್ತಾ ರೆಡಿಯಾಗಲು ಹೊರಟ ಆನೆಗೆ ಶಾಕ್ ಆಗಿತ್ತು. ಯಾಕೆಂದರೆ ಆನೆ ಒಣಗಲು ಹಾಕಿದ್ದ ಚಡ್ಡಿ ಕಾಣಿಸುತ್ತಿರಲಿಲ್ಲ. ಅದನ್ನು ಇರುವೆ ಹಾಕಿಕೊಂಡು ಹೋಗಿತ್ತು!

ಕತೆ 3
ಆನೆ ಮತ್ತು ಇರುವೆಗೆ ಯಾಕೋ ಹಾಸ್ಟೆಲ್ ಊಟ ಸಾಕಾಗಿ ಹೋಗಿತ್ತು. ಅದಕ್ಕೇ ಒಂದು ದಿನ ಹೊರಗೆ ಹೋಗಿ ಜ್ಯೂಸ್ ಕುಡಿಯೋಣ ಅಂತ ಅಂಗಡಿಗೆ ಹೋದ್ರು. ಅಲ್ಲಿ ಆನೆ ಒಂದು ಪೈನಾಪಲ್ ಜ್ಯೂಸ್ ಹೇಳಿದ್ರೆ ಇರುವೆ ಒಂದು ಆಪಲ್ ಜ್ಯೂಸ್ ಗೆ ಆರ್ಡರ್ ಮಾಡಿತು. ಅರ್ಧ ಕುಡಿಯುವಷ್ಟರಲ್ಲಿ ಆನೆಗೆ ಸಾಕಾಗಿ ಹೋಯ್ತು. ಆದರೆ ಆಹಾರ ವೇಸ್ಟ್ ಆಗಬಾರದಲ್ಲ ಅಂತ ಇರುವೆ ಏನು ಮಾಡಿತು ಗೊತ್ತಾ? ಆನೆ ಸಾಕಾಯ್ತು ಎಂದು ಬಿಟ್ಟಿದ್ದ ಅರ್ಧ ಪೈನಾಪಲ್ ಜ್ಯೂಸ್ ನ್ನೂ ತಾನೇ ಕುಡಿದು ಖಾಲಿ ಮಾಡಿತು!

ಕತೆ 4
ಆನೆ ಮತ್ತು ಇರುವೆ ಊಟ ಮುಗಿಸಿ ಮಾತನಾಡುತ್ತಾ ಕೂತಿದ್ದವು. ಯಾಕೋ ಆನೆಗೆ ಮನೆ ನೆನಪಾಗಿ ನಿದ್ರೆಯೇ ಬರುತ್ತಿರಲಿಲ್ಲ. ತುಂಬಾ ಬೇಸರದಲ್ಲಿತ್ತು. ಆಗ ಇರುವೆ ಏನು ಮಾಡಿತು ಗೊತ್ತೇ?
ಬಾ ಎಂದು ಆನೆಯನ್ನು ತನ್ನ ಮಡಿಲಲ್ಲಿ ಮಲಗಲು ಹೇಳಿತು!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ