ನರಕಕ್ಕೂ ಭಾರತ

ಅಮೆರಿಕನ್ ಪ್ರಜೆಯೊಬ್ಬ ಅಪಘಾತವೊಂದರಲ್ಲಿ ಸತ್ತಿದ್ದ. ನರಕಕ್ಕೆ ಹೋದಾಗ ಅಲ್ಲಿ ಬೇರೆ ಬೇರೆ ದೇಶಗಳ ನರಕಗಳನ್ನೂ ಕಂಡ ಆತ ತನ್ನ ಎಲ್ಲವನ್ನೂ ಸಂದರ್ಶಿಸುವ ನಿರ್ಧಾರಕ್ಕೆ ಬಂದಿದ್ದ.

ಮೊದಲಿಗೆ ತನ್ನದೇ ದೇಶದ ನರಕದಲ್ಲಿ ಶಿಕ್ಷೆಯ ವಿವರಗಳನ್ನು ಪಡೆದುಕೊಂಡ. ಮೊದಲಿಗೆ ವಿದ್ಯುತ್ ಕುರ್ಚಿ ಮೇಲೆ ಕುಳ್ಳಿರಿಸಿ ಶಿಕ್ಷೆ ನೀಡುತ್ತಾರೆ. ನಂತರ ಭೂತವೊಂದು ಬಂದು ಛಡಿಯೇಟು ನೀಡುತ್ತದೆ ಎಂದು ಅಮೆರಿಕಾ ನರಕದ ಹೊರಗೆ ನಿಂತಿದ್ದ ವ್ಯಕ್ತಿಯು ಉತ್ತರಿಸಿದ.

ಬೇರೆ ಕಡೆ ಕಡಿಮೆ ಶಿಕ್ಷೆಯ ಅವಕಾಶ ದೊರೆಯಬಹುದು ಎಂದು ಅಮೆರಿಕನ್ ಇತರ ದೇಶಗಳ ನರಕಗಳತ್ತ ಕಣ್ಣು ಹಾಯಿಸಿದ. ರಷ್ಯಾ, ಜಪಾನ್, ಚೀನಾ ಹೀಗೆ ಎಲ್ಲಾ ದೇಶಗಳೂ ಕಠಿಣ ಶಿಕ್ಷೆಗಳ ಪಟ್ಟಿಯನ್ನೇ ನೀಡುತ್ತಿದ್ದವು.

ಬೇಸರಗೊಂಡ ಆತ ಭಾರತವನ್ನೊಮ್ಮೆ ಪರೀಕ್ಷಿಸುವ ನಿರ್ಧಾರಕ್ಕೆ ಬಂದ. ನೋಡುವಾಗ ಭಾರತದ ನರಕದ ಮುಂದೆ ಭಾರೀ ಸರದಿ ಸಾಲಿತ್ತು. ಅದಕ್ಕೆ ಸಿಕ್ಕ ಕಾರಣ ಕೇಳಿ ಆತನಿಗೆ ಖುಷಿಯೋ ಖುಷಿ.

ಇಲ್ಲಿ ವಿದ್ಯುತ್ ಕುರ್ಚಿ ಹಾಳಾಗಿದೆ. ಹಾಸಿಗೆಯ ಮೊಳೆಗಳನ್ನು ಯಾರೋ ಕದ್ದಿದ್ದಾರೆ. ಇಲ್ಲಿಯ ಉಸ್ತುವಾರಿ ನೋಡಿಕೊಳ್ಳುವ ಭೂತ ಹಿಂದೆ ಸರಕಾರಿ ಇಲಾಖೆಯಲ್ಲಿ ಕೆಲಸದಲ್ಲಿದ್ದವನಂತೆ. ಬಂದ ಕೂಡಲೇ ಸಹಿ ಹಾಕಿ ಕಾಫಿಗೆ ಹೋಗಿಬಿಡುತ್ತಾನೆ ಎಂದು ಅಲ್ಲಿದ್ದವನೊಬ್ಬ ವಿವರಿಸಿದ್ದನ್ನು ಕೇಳಿದ ಅಮೆರಿಕನ್ ಭಾರೀ ಉದ್ದಕ್ಕೆ ಬೆಳೆದಿದ್ದ ಸರದಿ ಸಾಲಿನಲ್ಲಿ ನಿಂತುಕೊಂಡ..!

ವೆಬ್ದುನಿಯಾವನ್ನು ಓದಿ