ನರಕ

ಭಾರತೀಯನೊಬ್ಬ ಸತ್ತ ಮೇಲೆ ನರಕಕ್ಕೆ ಹೋದ ಅಲ್ಲಿ ಬೇರೆ ಬೇರೆ ದೇಶಗಳ ನರಕಗಳೂ ಇದ್ದವು. ಅಲ್ಲದೆ ಯಾವುದೇ ವೀಸಾದ ಅಗತ್ಯವಿಲ್ಲದೆ ನಮಗೆ ಬೇಕಾದ ದೇಶದ ನರಕಕ್ಕೆ ಹೋಗುವ ಅವಕಾಶವೂ ಇತ್ತು.

ಜೀವಂತವಾಗಿರುವಾಗಂತೂ ವಿದೇಶಕ್ಕೆ ಹೋಗುವ ಕನಸು ನನಸಾಗಲಿಲ್ಲ ಇಲ್ಲಿ ಉಚಿತವಾಗಿ ಸಿಗುವ ಅವಕಾಶವನ್ನು ಬಿಡುವುದು ಯಾಕೆ ಎಂದು ಯೋಚಿಸಿದ ಭಾರತೀಯನು ಮೊದಲಿಗೆ ಜರ್ಮನಿ ದೇಶದ ನರಕದಲ್ಲಿ ಹೋಗಿ ಶಿಕ್ಷೆ ಏನೆಂದು ಕೇಳಿದ.

ಇಲ್ಲಿ ಬಂದವರಿಗೆ ಮೊದಲಿಗೆ ವಿದ್ಯುತ್ ಖುರ್ಚಿಯ ಮೇಲೆ ಕುಳ್ಳಿರಿಸಿ ಶಿಕ್ಷೆ ನೀಡುತ್ತಾರೆ. ನಂತರ ಭೂತವೊಂದು ಬಂದು ಛಡಿಯೇಟು ನೀಡುತ್ತದೆ ಎಂದು ಜರ್ಮನಿ ನರಕದ ಹೊರಗೆ ನಿಂತಿದ್ದ ವ್ಯಕ್ತಿಯು ಉತ್ತರಿಸಿದ. ಭಾರತೀಯನಿಗೆ ಈ ಶಿಕ್ಷೆ ಯಾಕೋ ಅತಿ ಅನಿಸಿತು. ಬೇರೆ ದೇಶ ನೋಡೋಣವೆಂದು ಅಮೆರಿಕ, ರಶ್ಯಾ, ಜಪಾನ್ ಹೀಗೆ ಬೇರೆ ಬೇರೆ ದೇಶಗಳ ನರಕಕ್ಕೆ ಹೋಗಿ ವಿಚಾರಿಸಿದಾಗಲೂ ಕಠಿಣವಾದ ಶಿಕ್ಷೆಗಳ ಪಟ್ಟಿಯನ್ನೇ ಹೇಳುತ್ತಿದ್ದರು.

ಬೇಸರಗೊಂಡು ಭಾರತೀಯನು ಬೇರೆ ವಿಧಿಯಿಲ್ಲದೆ ಭಾರತದ ನರಕಕ್ಕೇ ಮರಳಿದಾಗ ಅವನಿಗೊಂದು ಆಶ್ಚರ್ಯ ಕಾದಿತ್ತು. ಭಾರತದ ನರಕದ ಮುಂದೆ ಇಷ್ಟುದ್ದ ಕ್ಯೂ. ಭಾರತದ ನರಕದಲ್ಲೂ ಕಠಿಣ ಶಿಕ್ಷೆ ಇದೆ ಮತ್ಯಾಕೆ ಇಲ್ಲಿ ಇಷ್ಟೊಂದು ಕ್ಯೂ ಅಂತ ಯೋಚಿಸಿ ಒಬ್ಬನನ್ನು ಪ್ರಶ್ನಿಸಿದಾಗ ಆತನು ಹೀಗೇಂದು ಉತ್ತರಕೊಟ್ಟ.

"ಇಲ್ಲಿ ವಿದ್ಯುತ್ ಕುರ್ಚಿ ಹಾಳಾಗಿದೆ. ಹಾಸಿಗೆಯ ಮೊಳೆಗಳನ್ನು ಯಾರೋ ಕದ್ದಿದ್ದಾರೆ. ಇಲ್ಲಿಯ ಭೂತ ಹಿಂದೆ ಸರಕಾರಿ ಇಲಾಖೆಯಲ್ಲಿ ಕೆಲಸದಲ್ಲಿದ್ದವನಂತೆ. ಬಂದ ಕೂಡಲೇ ಸಹಿ ಹಾಕಿ ಕಾಫಿಗೆ ಹೋಗಿಬಿಡುತ್ತಾನೆ " ಇದನ್ನು ಕೇಳಿದ ಭಾರತೀಯನು ತವರೂರ ಕ್ಯೂನಲ್ಲಿ ನಿಂತುಕೊಂಡ.

ವೆಬ್ದುನಿಯಾವನ್ನು ಓದಿ