ಪಂಥ ಕಟ್ಟುವ ಚಟ

ಬಂತ ವಿಮಾನದಲ್ಲಿ ಅಮೆರಿಕಾಗೆ ಪ್ರಯಾಣಿಸುತ್ತಿದ. ಆತ ಪಕ್ಕ ಒಬ್ಬ ಅಮೆರಿಕನ್ ಕುಳಿತಿದ್ದ. ಆತನಿಗೆ ಪಂಥ ಕಟ್ಟುವ ಚಟ. ಬಂತಾನನ್ನು ಗೆಳೆತನ ಮಾಡಿಕೊಂಡು. ನಾನು ನಿನಗೊಂದು ಪ್ರಶ್ನೆ ಕೇಳುತ್ತೇನೆ ಉತ್ತರ ಹೇಳದಿದ್ದರೆ ನೀನು ನನಗೆ ಐದು ಡಾಲರ್ ಕೊಡಬೇಕು. ಅದೇ ರೀತಿ ನೀನು ನನಗೊಂದು ಪ್ರಶ್ನೆ ಕೇಳಬೇಕು ಉತ್ತರ ಹೇಳದಿದ್ದರೆ ನಾನು ನಿನಗೆ 500 ಡಾಲರ್ ಕೊಡುತ್ತೇನೆ ಎಂದು ಒಪ್ಪಂದ ಮಾಡಿಕೊಂಡ. ಈ ಒಪ್ಪಂದಕ್ಕೆ ಬಂತಾ ಒಪ್ಪಿದ.

ಮೊದಲಿಗೆ ಅಮೆರಿಕನ್ ಬಂತಾನಿಗೆ ಪ್ರಶ್ನೆಗ ಕೇಳಿದ. 'ಅಮೆರಿಕ ಮತ್ತು ಭಾರತ ನಡುವಿನ ದೂರ ಎಷ್ಟು' ತುಂಬಾ ಹೊತ್ತು ಯೋಚಿಸಿದ ಬಂತಾ ಉತ್ತರ ಗೊತ್ತಿಲ್ಲ ಎಂದು ಹೇಳಿ ಐದು ಡಾಲರ್ ನೀಡಿದ.

ಈಗ ಬಂತಾನ ಸರದಿ. ಈತನಿಗೆ ತಕ್ಕ ಬುದ್ಧಿ ಕಲಿಸಬೇಕೆಂದ ಬಂತಾ ಕಠಿಣವಾದ ಪ್ರಶ್ನೆಯನ್ನೇ ಕೇಳಿದ ಆತನ ಪ್ರಶ್ನೇ ಹೀಗಿತ್ತು' ಬೆಟ್ಟ ಏರುವಾಗ ಮೂರು ಕಾಲುಗಳು ಇಳಿಯುವಾಗ ನಾಲ್ಕು ಕಾಲುಗಳು ಯಾವುದು ಆ ಪ್ರಾಣಿ?' ಅಮೆರಿಕನ್ ಇಂಟರ್ನೆಟ್ ಎಲ್ಲಾ ಜಾಲಾಡಿದ, ಯೋಚಿಸಿ ಯೋಚಿಸಿ ಕೊನೆಗೆ ಉತ್ತರ ಗೊತ್ತಿಲ್ಲದೆ 500 ಡಾಲರನ್ನು ಬಂತಾನಿಗೆ ನೀಡಿ ಉತ್ತರಕ್ಕಾಗಿ ನಿರೀಕ್ಷಿಸಿದ.

ಐದು ಡಾಲರ್ ಅಮೆರಿಕನ್‌ಗೆ ನೀಡಿದ ಬಂತಾ ನನಗೂ ಉತ್ತರ ತಿಳಿಯದು ಎಂದ.

ವೆಬ್ದುನಿಯಾವನ್ನು ಓದಿ