ಪುಣ್ಯ

ತನ್ನ ಕತ್ತೆಯನ್ನು ಕಳೆದುಕೊಂಡಿದ್ದ ರಾಮ ದೇವರಿಗೆ ಧನ್ಯವಾದ ತಿಳಿಸುತ್ತಿದ್ದ.

ಇದನ್ನು ನೋಡಿದ ರಾಮನ ಗೆಳೆಯ: ನಿನ್ನ ಕತ್ತೆ ಕಳೆದು ಹೋಗಿದೆಯಲ್ಲಾ, ಮತ್ಯಾಕೆ ನೀನು ದೇವರಿಗೆ ಧನ್ಯವಾದ ಹೇಳುತ್ತಿದ್ದಿ ಎಂದು ಕೇಳಿದ.

ಆಗ ರಾಮ: ಸದ್ಯ ಕತ್ತೆ ಕಳೆದುಹೋದಾಗ ನಾನು ಕತ್ತೆ ಮೇಲಿರಲಿಲ್ಲವಲ್ಲ ಅದು ನನ್ನ ಪುಣ್ಯ ಎಂದು ಖುಷಿಯಿಂದ ಹೇಳಿದ.

ವೆಬ್ದುನಿಯಾವನ್ನು ಓದಿ