ಮುತ್ತಿನ ಹಾರ

ಬೆಳಗ್ಗೆ ಎದ್ದ ಕೂಡಲೇ ಹೆಂಡತಿ ಗಂಡನನ್ನು ಕರೆದು ನಿನ್ನೆ ರಾತ್ರಿ ನಿದ್ದೆಯಲ್ಲಿ ನೀವು ನನಗೆ ಮುತ್ತಿನ ಹಾರ ತಂದುಕೊಟ್ಟಂತೆ ಕನಸು ಬಿದ್ದಿತ್ತು. ಏನಿದರ ಅರ್ಥ ಅಂತ ಕುತೂಹಲದಿಂದ ಕೇಳಿದಳು.

ಅದರ ಅರ್ಥ ನಿನಗೆ ಸಂಜೆ ತಿಳಿಯುತ್ತೆ ಎಂದು ಗಂಡ ಆಫೀಸಿಗೆ ಹೋದ. ಮನೆಯಲ್ಲಿ ಹೆಂಡತಿ ಸಂಜೆಯಾಗುವುದನ್ನೇ ಕಾಯುತ್ತಿದ್ದಳು.

ಸಂಜೆ ಗಂಡ ಬಂದವನೇ ಕೈಯಲ್ಲೊಂದು ಉಡುಗೊರೆ ತಂದಿದ್ದ. ಉತ್ಸಾಹದಿಂದ ಕಾಯುತ್ತಿದ್ದ ಹೆಂಡತಿಗೆ ಅದನ್ನು ಪ್ರೀತಿಯಿಂದ ನೀಡಿದ.

ಹೆಂಡತಿ ಕುತೂಹಲದಿಂದ ಅದನ್ನು ಬಿಚ್ಚಿದಳು.'ಕನಸಿನ ಅರ್ಥಗಳು' ಎಂಬ ಪುಸ್ತಕವಾಗಿತ್ತು ಆ ಉಡುಗೊರೆ.

ವೆಬ್ದುನಿಯಾವನ್ನು ಓದಿ