ಇಂಗ್ಲೇಂಡಿಗೆ ಹೋಗಿದ್ದ ಬಂತಾ ಬೀಚ್‌ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ. ಒಬ್ಬ ಯುವತಿ ಬಂದು ಬಂತಾನಿಗೆ ಆರ್ ಯೂ ರಿಲಾಕ್ಸಿಂಗ್ ಅಂತ ಕೇಳಿದಳು. ಆಗ ಬಂತಾ ಇಲ್ಲಾ ನಾನು ಬಂತಾ ಸಿಂಗ್ ಅಂತ ಹೇಳಿದ. ಸ್ವಲ್ಪ ಹೊತ್ತಿನ ನಂತರ ಮತ್ತೊಬ್ಬ ಹುಡುಗ ಬಂದು ಅದೇ ಪ್ರಶ್ನೆಯನ್ನು ಕೇಳಿದ. ನಾನು ರಿಲಾಕ್ಸಿಂಗ್ ಅಲ್ಲಪ್ಪಾ ನಾನು ಬಂತಾ ಸಿಂಗ್ ಅಂತ ಹೇಳಿದ. ಸ್ವಲ್ಪ ಹೊತ್ತಿನ ಬಳಿಕ ಇನ್ನೊಬ್ಬ ಬಂದು ಅದೇ ಪ್ರಶ್ನೆಯನ್ನು ಕೇಳಿದಾಗ ಬಂತಾನಿಗೆ ಹುಚ್ಚು ಹಿಡಿದಂತಾಗಿ ನಾನು ಕೂತ ಸ್ಥಳವೇ ಸರಿಯಿಲ್ಲ ಎಂದು ಎಣಿಸಿ ಬೇರೆ ಸ್ಥಳಕ್ಕೆ ಹೋದ. ಅಲ್ಲಿ ಒಬ್ಬ ಆರಾಮದಲ್ಲಿ ಮಲಗಿದ್ದ. ಬಂತಾ ಅವನ ಬಳಿ ಹೋಗಿ ಆರ್ ಯೂ ರಿಲಾಕ್ಸಿಂಗ್ ಅಂತ ಕೇಳಿದ. ಆತ ಎಸ್ ಎಂದಾಗ ಬಂತಾನಿಗೆ ಎಲ್ಲಿಲ್ಲದ ಕೋಪ ಬಂದಿತ್ತು. ಆತನ ಕೆನ್ನೆಗೆ ಹೊಡೆದು ಅವರೆಲ್ಲಾ ನಿನ್ನನ್ನು ಹುಡುಕುತ್ತಿದ್ದರೆ ನೀನು ಮಾತ್ರ ಇಲ್ಲಿ ಆರಾಮದಲ್ಲಿ ಕೂತಿದ್ದೀಯಾ ಎಂದ .