ಹೀಗಾ ವಿಷ್ಯಾ..?

ಗುರುವಾರ, 20 ನವೆಂಬರ್ 2014 (14:16 IST)
ಸಂತಾ: ಮತದಾನಕ್ಕೆ 18 ವರ್ಷ ಮತ್ತು ಮದುವೆಗೆ ವಯಸ್ಸು 21 ವರ್ಷ ಎಂದು ಸರಕಾರ ಯಾಕೆ ನಿರ್ಧರಿಸಿತು?
 
ಬಂತಾ: ದೇಶವನ್ನು ಸಂಭಾಳಿಸಿದಂತೆ ಹೆಂಡತಿಯನ್ನು ಸಂಭಾಳಿಸಲಾಗದು ಎಂಬುದು ಸರಕಾರಕ್ಕೂ ಗೊತ್ತು..!
 
********
 
ಕೊಡೆ ತಗೊಂಡು ಹೋಗಪ್ಪ
 
ಸಂತಾ: ತೋಟಕ್ಕೆ ನೀರು ಹಾಕಿದ್ಯಾ?
 
ಬಂತಾ: ಇಲ್ಲ.. ಮಳೆ ಬರ್ತಿದ್ಯಲ್ಲಾ..
 
ಸಂತಾ: ಅದ್ಕೇನು ಮುಖ ನೋಡ್ತೀಯಾ.. ಕೊಡೆ ಹಿಡ್ಕೊಂಡು ಹೋಗು..!
 
******
 
ವಾಪಸ್ ಹೋಗಬಹುದಲ್ವಾ?
 
ಡ್ರೈವರ್: ಸಾರ್.. ಪೆಟ್ರೋಲ್ ಮುಗಿದಿದೆ. ಗಾಡಿ ಮುಂದೆ ಹೋಗಲ್ಲ.
 
ಸಂತಾ: ಸರಿ ಕಣಪ್ಪಾ... ಹಿಂದೆ ಹೋಗೋಣ..!
 
********
 
ಅಷ್ಟೊಂದು ಪ್ರೀತಿಯಿಂದ..
 
ಸಂತಾ ಫೋನ್‌ನಲ್ಲಿ ಮಾತನಾಡುತ್ತಿದ್ದ...
 
ಬಂತಾ: ಯಾರೊಂದಿಗೆ ಮಾತಾಡ್ತಿದ್ದೆ?
 
ಸಂತಾ: ಹೆಂಡತಿ ಜತೆ.
 
ಬಂತಾ: ಅಷ್ಟೊಂದು ಪ್ರೀತಿಯಿಂದ...?
 
ಸಂತಾ: ನಿನ್ನ ಹೆಂಡತಿ..!
 
 
**********
 
ಪಾರ್ಕಿಂಗ್
 
ಸಂತಾ ತನ್ನ ರಿಕ್ಷಾದ ಒಂದು ಚಕ್ರವನ್ನು ಕಳಚುವುದರಲ್ಲಿ ನಿರತನಾಗಿದ್ದ.
 
ಬಂತಾ: ಯಾಕೋ ಟೈರ್ ಬಿಚ್ತಾ ಇದ್ದೀಯಾ..?
 
ಸಂತಾ: 'ಟೂ ವೀಲರ್ಸ್‌ಗೆ ಮಾತ್ರ ಪಾರ್ಕಿಂಗ್' ಅಂತ ಬರ್ದಿದ್ದು ನಿಂಗೆ ಕಾಣ್ಸಲ್ವೇನೋ..?!

ವೆಬ್ದುನಿಯಾವನ್ನು ಓದಿ