ಪ್ರೀತಿಯ ಹಿನ್ನಲೆ

ಗುರುವಾರ, 20 ನವೆಂಬರ್ 2014 (14:17 IST)
ಒಬ್ಬ: ದೇವರು ಮಹಿಳೆಯರನ್ನು ಯಾಕೆ ಸುಂದರಿಯರನ್ನಾಗಿ ಮಾಡಿದ?
 
ಮತ್ತೊಬ್ಬ: ನಿನ್ನಂಥವರು ಅವರನ್ನು ಪ್ರೀತಿಸಲು.
 
ಒಬ್ಬ: ಆದರೆ ಅವರನ್ನೂ ಮೂರ್ಖರನ್ನಾಗಿ ಮಾಡಿದ್ದು ಯಾಕೆ?
 
ಮತ್ತೊಬ್ಬ: ಮತ್ತೆ.. ನಿನ್ನಂಥವರನ್ನು ಪ್ರೀತಿಸಬೇಕಲ್ಲ..!
 
*******
 
ಸ್ವರ್ಗದ ವಿವರಣೆ
 
 
ಹೆಂಡತಿ: ಪತಿ - ಪತ್ನಿ ಇಬ್ಬರನ್ನೂ ಜತೆಯಾಗಿ ಸ್ವರ್ಗಕ್ಕೆ ಬಿಡುವುದಿಲ್ಲ.. ಯಾಕಂತ ನಿಮಗ್ಗೊತ್ತಾ?
 
ಗಂಡ: ಹೌದು.. ನನಗ್ಗೊತ್ತು. ಹಾಗೆಲ್ಲಾದ್ರೂ ಒಟ್ಟಿಗೆ ಬಿಟ್ಟಿದ್ದೇ ಆದ್ರೆ ಅದನ್ನು ಸ್ವರ್ಗ ಅಂತಾದರೂ ಯಾಕೆ ಕರೆಯಬೇಕು?!
 
******
 
ಸೇಡಿನ ರೀತಿ
 
ಗಂಡ: ನಾನು ನಿನ್ನ ಮೇಲೆ ಎಷ್ಟೇ ರೇಗಾಡಿದ್ರೂ ನೀನ್ಯಾಕೆ ಕೋಪ ಮಾಡ್ಕೊಳಲ್ಲ? ಹೇಗೆ ಕೋಪ ನಿಯಂತ್ರಿಸ್ತೀಯಾ?
 
ಹೆಂಡತಿ: ಟಾಯ್ಲೆಟ್ ಕ್ಲೀನ್ ಮಾಡ್ತೀನಿ..
 
ಗಂಡ: ಹಾಗೆ ಮಾಡಿದ್ರೆ ಎಲ್ಲ ಸರಿ ಹೋಗತ್ತಾ?
 
ಹೆಂಡತಿ: ಅದಕ್ಕೆ ನಾನು ನಿಮ್ಮ ಟೂತ್‌ಬ್ರಶ್ ಬಳಸ್ತೀನಿ..!
 
********
ಮದುವೆ ಮಾಡ್ಕೊಳ್ರೀ..
 
ಆತ: ಸುದೀರ್ಘ ಬದುಕಿಗಾಗಿ ಏನಾದರೂ ದಾರಿ ಇದೆಯೇ?
 
ಡಾಕ್ಟರ್: ಮದುವೆಯಾಗುವುದು.
 
ಆತ: ಇದರಿಂದ ಹೇಗೆ ಸಾಧ್ಯ?
 
ಡಾಕ್ಟರ್: ಹಾಗಲ್ಲ.. ನೀವು ಮದುವೆ ಮಾಡ್ಕೊಂಡ್ರೆ ನಂತ್ರ ನಿಮ್ಗೆ ಸುದೀರ್ಘ ಜೀವನ ಮತ್ತೆ ಬೇಕು ಅಂತ ಅನ್ನಿಸೋದೇ ಇಲ್ಲ..!
 
********
 
ಭಾಗ್ಯವಂತ
 
ಆತ: ಸಾರ್.. ನನ್ನ ಹೆಂಡತಿ ಕಾಣಿಸ್ತಾ ಇಲ್ಲ..
 
ಪೋಸ್ಟ್‌ಮ್ಯಾನ್: ಇದು ಪೋಸ್ಟ್ ಆಫೀಸ್ ಕಣಪ್ಪಾ... ಪೊಲೀಸ್ ಸ್ಟೇಷನ್‌‌ಗೆ ಹೋಗು.
 
ಆತ: ನಾನೇನು ಮಾಡ್ಲಿ.. ಖುಷಿಯಲ್ಲಿ ಏನು ಮಾಡ್ಬೇಕುಂತಾನೇ ಗೊತ್ತಾಗ್ತಿಲ್ಲ..!

ವೆಬ್ದುನಿಯಾವನ್ನು ಓದಿ