ಮದುವೆ ಮಾಡ್ಕೊಳ್ತಿದ್ದೆ..!

ಗುರುವಾರ, 20 ನವೆಂಬರ್ 2014 (14:32 IST)
ಸಂತಾ ಸಾಲ ಮಾಡಿ ಕಾರು ಖರೀದಿಸಿದ್ದ. ಮರು ಪಾವತಿ ಮಾಡದ ಕಾರಣ ಸ್ವಲ್ಪ ಸಮಯದ ನಂತರ ಬ್ಯಾಂಕ್‌ನವರು ಕಾರನ್ನು ತೆಗೆದುಕೊಂಡು ಹೋದರು.
 
ಸಂತಾ: ಹೀಗಾಗುತ್ತೆ ಅಂತ ನಂಗೆ ಮೊದಲೇ ಗೊತ್ತಿದ್ದಿದ್ದರೆ ನನ್ನ ಮದುವೆಗೆ ಕೂಡ ಸಾಲ ತಗೋತಿದ್ದೆ...!
 
 
***
 
ಸ್ಮರಣಶಕ್ತಿ...
 
Joke
 
ಬಾಲಕ ಸಂತಾ ತರಗತಿಯಲ್ಲಿ ಪಾಠ ಕೇಳುವುದನ್ನು ಬಿಟ್ಟು ಬೇರೆಲ್ಲೋ ಮನಸ್ಸು ನೆಟ್ಟಿದ್ದಾನೆ ಎಂಬುದನ್ನು ಕಂಡುಕೊಂಡ ಟೀಚರ್ ಕೋಪಗೊಂಡಿದ್ದರು.
 
ಟೀಚರ್: ಸಂತಾ, 4, 2, 28 ಮತ್ತು 44ಗಳೆಂದರೇನು?
 
ಸಂತಾ (ಹೆಮ್ಮೆಯಿಂದ ): ಕಾರ್ಟೂನ್ ನೆಟ್‌ವರ್ಕ್, ಟೆನ್ ಸ್ಪೋರ್ಟ್ಸ್, ಡಿಸ್ಕವರಿ ಚಾನೆಲ್ ಮತ್ತು ಪೋಗೋ...!
 
***
ಹಾಗೆಲ್ಲ ಇರಲ್ಲ..!
 
Joke
 
ಬಂತಾ: ಸುಂದರಿ, ಬುದ್ಧಿವಂತೆ, ಅರ್ಥಮಾಡಿಕೊಂಡು ಹೋಗುವವಳು, ಕೇರ್ ತೆಗೆದುಕೊಳ್ಳುವವಳು, ಹೊಟ್ಟೆ ಕಿಚ್ಚು ಇಲ್ಲದವಳು ಮತ್ತು ಅಚ್ಚುಕಟ್ಟಾಗಿ ಅಲಂಕಾರ ಮಾಡಿಕೊಳ್ಳುವ ಹೆಂಡತಿಯನ್ನು ಏನೆಂದು ಕರೆಯಬಹುದು?
 
ಸಂತಾ: ಕನಸು..!
 
**********
 
ಹತ್ತಕ್ಕೆ ಮುತ್ತು..!
 
Joke
 
ಸಂತಾ: ನಿನ್ನನ್ನು ಮುಟ್ಟದೆ ನಾನು ನಿನಗೆ ಕಿಸ್ ಕೊಡಬಲ್ಲೆ
 
ಹುಡುಗಿ: ನಿನಗದು ಅಸಾಧ್ಯ
 
ಸಂತಾ: ಹತ್ತತ್ತು ರೂಪಾಯಿ ಚಾಲೆಂಜ್
 
ಹುಡುಗಿ: ಓಕೆ..
 
(ಸಂತಾ ಆಕೆಯನ್ನು ಚುಂಬಿಸುತ್ತಾನೆ)
 
ಹುಡುಗಿ: ನೀನು ನನ್ನನ್ನು ಮುಟ್ಟಿದ್ದೀ.. ಮುಟ್ಟಿದ್ದೀ...
 
ಸಂತಾ: ತಗೋ 10 ರೂಪಾಯಿ..!
 
***
 
ಆನ್‌ಲೈನ್ ಕಿಸ್...
 
Joke
 
ಆಪ್ತ ಕಾರ್ಯದರ್ಶಿ: ಸರ್, ನಿಮ್ಮ ಹೆಂಡತಿ ಫೋನ್.. ಅವರು ನಿಮ್ಗೆ ಫೋನ್‌ನಲ್ಲಿ ಕಿಸ್ ಕೊಡ್ಬೇಕಂತೆ.
 
ಸಂತಾ: ನಾನು ಬ್ಯುಸಿ ಇದ್ದೀನಿ.. ನೀನೀಗ ತಗೋ... ನಂಗೆ ಮತ್ತೆ ಕೊಡು.

ವೆಬ್ದುನಿಯಾವನ್ನು ಓದಿ