*****
ಇದೇನಾ ಉತ್ರ..
ಒಬ್ಬ: ಕೋಳಿ ಮೊದಲೋ ಅಥವಾ ಮೊಟ್ಟೆ ಮೊದಲೋ...
ಮತ್ತೊಬ್ಬ: ನೀವು ಯಾವುದನ್ನು ಮೊದಲು ಆರ್ಡರ್ ಮಾಡ್ತೀರೋ ಅದು ಮೊದ್ಲು ಬರತ್ತೆ...!
***
ಈಡಿಯೆಟ್..
ಪುಟ್ಟ: ಈಡಿಯೆಟ್ ಅಂದ್ರೇನಪ್ಪಾ?
ತಂದೆ: ತನ್ನ ಯೋಚನೆಗಳನ್ನು ತೀರಾ ಕಠಿಣವಾಗಿ ಮತ್ತು ಸುದೀರ್ಘವಾಗಿ ವಿವರಿಸಲು ಯತ್ನಿಸುವ ಹಾಗೂ ಇತರರಿಗೆ ಅರ್ಥವೇ ಆಗದ, ಯಾರ ಮಾತನ್ನೂ ಕೇಳದ ಮನುಷ್ಯನನ್ನು ಈಡಿಯೆಟ್ ಎನ್ನಬಹುದು. ನಾನು ಹೇಳಿದ್ದು ನಿಂಗೆ ಅರ್ಥವಾಯ್ತಾ?