ಎ-ಟು-ಝೆಡ್..

ಗುರುವಾರ, 20 ನವೆಂಬರ್ 2014 (14:14 IST)
ಆತ: ನಿಂಗೆ ಇಂಗ್ಲೀಷ್ ಬರತ್ತಾ?
 
ಈತ: ಹೌದು, ಬರುತ್ತೆ.
 
ಆತ: ನಾಗ ಪಂಚಮಿಯ ವಿರುದ್ಧ ಪದ ಯಾವುದು?
 
ಈತ: ನಾಗ ಡು ನಾಟ್ ಪಂಚ್ ಮಿ..!
 
*********
 
ಕಳ್ಳ ನಾನಲ್ಲ..
 
ನ್ಯಾಯಾಧೀಶ: ಏನ್ ತಪ್ಪು ಮಾಡಿದೀಯಾ.. ನಿನ್ನನ್ನು ಯಾಕೆ ಬಂಧಿಸಿದ್ದಾರೆ?
 
ಕಳ್ಳ: ಬೇಗ ಶಾಪಿಂಗ್ ಮಾಡಿದ್ದಕ್ಕೆ.
 
ನ್ಯಾಯಾಧೀಶ: ಓಹೋ... ಅದು ತಪ್ಪಲ್ವಲ್ಲಾ. ಓಕೆ. ಬೇಗ ಅಂದ್ರೆ ಎಷ್ಟು ಬೇಗ?
 
ಕಳ್ಳ: ಅಂಗಡಿ ತೆರೆಯುವ ಮೊದಲೇ...!
 
********
 
ಮುಗಿದು ಹೋಗಿದೆ
 
 
ಅವನಿಗೆ ಗೆಳೆಯನಿಂದ ಖಾಲಿ ಎಸ್‌ಎಂಎಸ್ ಬಂದಿತ್ತು. ಇದನ್ನು ಗೆಳೆಯನಿಗೆ ತಿಳಿಸಬೇಕೆಂದು ಕರೆ ಮಾಡಿದ ಆತ ಹೇಳಿದ್ದು ಹೀಗೆ.. "ನಿನ್ನ ಮೊಬೈಲ್‌ನಲ್ಲಿ ಶಾಯಿ ಮುಗಿದು ಹೋಗಿದೆ.. ನನಗೆ ಖಾಲಿ ಮೆಸೇಜ್ ಬರ್ತಾ ಇದೆ... ಬೇಗ ತುಂಬಿಸು..".
 
********
 
ಹೆಂಡತಿ ಅಂದ್ರೆ...
 
 
ಒಬ್ಬ: ನೀನು ಯಾವತ್ತಾದ್ರೂ ಸುಳ್ಳು ಪತ್ತೆ ಯಂತ್ರವನ್ನು ನೋಡಿದ್ದೀಯಾ?
 
ಮತ್ತೊಬ್ಬ: ಹೌದು, ನಾನು ಅವಳನ್ನೇ ಮದುವೆಯಾಗಿದ್ದೇನೆ..!
 
 
***
 
ಬದುಕಲ್ಲ ಅಂತೀರಾ?
 
ಹೆಂಡತಿ: ನೋಡಿ.. ನಮ್ಮ ಅಡುಗೆ ಮನೆಗೆ ಕಳ್ಳ ನುಗ್ಗಿದ್ದಾನೆ.. ಆತ ನಾನು ಮಾಡಿದ ಕೇಕ್ ತಿಂತಿದ್ದಾನೆ...
 
ಗಂಡ: ನಾನೀಗ ಪೊಲೀಸರಿಗೆ ಫೋನ್ ಮಾಡ್ಬೇಕಾ ಅಥವಾ ಆಂಬುಲೆನ್ಸ್...?!

ವೆಬ್ದುನಿಯಾವನ್ನು ಓದಿ