ಶ್ರೇಷ್ಠ ಪ್ರದರ್ಶನ

ಗುರುವಾರ, 20 ನವೆಂಬರ್ 2014 (14:31 IST)
ಪ್ರಶ್ನೆ: ಭಾರತೀಯ ಬ್ಯಾಟ್ಸ್‌ಮನ್‌ಗಳು ಶ್ರೇಷ್ಠ ಪ್ರದರ್ಶನವನ್ನು ಎಲ್ಲಿ ನೀಡುತ್ತಾರೆ?
 
ಉತ್ತರ: ಜಾಹೀರಾತುಗಳಲ್ಲಿ..!
 
***
ಹ್ಯಾಟ್ರಿಕ್
 
ಪ್ರಶ್ನೆ: ಹ್ಯಾಟ್ರಿಕ್‌ನ ಭಾರತೀಯ ಕಲ್ಪನೆಯೇನು?
 
ಉತ್ತರ: ಮೂರು ಎಸೆತಗಳಿಂದ ಮೂರು ರನ್..!
 
***
ಡೊನೇಷನ್
 
ಯಾರೊ ಭಾರತೀಯ ಕ್ರಿಕೆಟ್ ತಂಡವನ್ನು ಕಿಡ್ನಾಪ್ ಮಾಡಿ 50 ಕೋಟಿ ರೂಪಾಯಿ ಬೇಡಿಕೆ ಇಟ್ರು. ಕೊಡದಿದ್ರೆ ಅವರನ್ನು ಸೀಮೆಎಣ್ಣೆ ಸುರಿದು ಸುಟ್ಟ್ ಹಾಕ್ತೀವಿ.. ಕೊಡಿ ಅಂದ್ರು.. ಅದಕ್ಕೆ ನಾನು 25 ಲೀಟರ್ ಸೀಮೆಎಣ್ಣೆ ಕೊಟ್ಟಿದ್ದೇನೆ..!
 
***
ಹೀಗೊಂದು ಎಸ್ಸೆಮ್ಮೆಸ್ ಬಂದಾಗ...
 
ನಾನು ಭಾರತವನ್ನು ತೊರೆಯುತ್ತಿದ್ದೇನೆ. ಕಾರಣ ಇಷ್ಟೇ-- ದೀಪಿಕಾ ಪಡುಕೋಣೆ ಗರ್ಭಿಣಿಯಾದದ್ದಕ್ಕೆ ನಾನೇ ಕಾರಣ ಅಂತ ಮಾಧ್ಯಮಗಳು ಬರೆದುಕೊಂಡಿವೆ. ಬಾಯ್...!
 
***
 
ಕಿಸ್ಸಸ್...
 
ಹುಡುಗಿ: ಈ ಡ್ರೆಸ್ ಬೆಲೆ ಎಷ್ಟು?
 
ಅಂಗಡಿಯಾತ: ಕೇವಲ ಐದು ಕಿಸ್ ಮಾತ್ರ.
 
ಹುಡುಗಿ: ಚೂಡಿದಾರಕ್ಕಾದ್ರೆ..?
 
ಅಂಗಡಿಯಾತ: ಹತ್ತು ಕಿಸ್.
 
ಹುಡುಗಿ: ಎರಡನ್ನೂ ಪ್ಯಾಕ್ ಮಾಡಿ. ಬಿಲ್ ನನ್ನ ಅಜ್ಜಿ ಕೊಡ್ತಾರೆ..!
 

ವೆಬ್ದುನಿಯಾವನ್ನು ಓದಿ