ದೊಡ್ಡ ಮನುಷ್ಯ

ಗುರುವಾರ, 20 ನವೆಂಬರ್ 2014 (15:43 IST)
`ಹೆಂಡತಿ: ನಿಮ್ಮ ಊರು ತುಂಬಾ ಪ್ರಬಲವಾದುದು ಎಂದು ಆಗಾಗ ಹೇಳುತ್ತೀರಲ್ಲ, ಯಾರಾದರೂ ದೊಡ್ಡ ಮನುಷ್ಯರು ಅಲ್ಲಿ ಹುಟ್ಟಿದ್ದಾರೆಯೆ?
ಗಂಡ: ಅದು ಹೇಗೆ ದೊಡ್ಡ ಮನುಷ್ಯನಾಗಿ ಹುಟ್ಟಲು ಸಾಧ್ಯ? ಮಗುವಾಗಿ ಮಾತ್ರ ಹುಟ್ಟಬಹುದು.`
 
`ನನ್ನ ಮಗನಿಗೆ ಇರುವ ಉಗುರು ಕಚ್ಚುವ ಅಭ್ಯಾಸ ನೆನೆಸಿಕೊಂಡರೆ ತುಂಬಾ ಭಯವಾಗುತ್ತೆ!
ಇದರಿಂದ ಏನು ಭಯ? ಇದೆಲ್ಲಾ ಸಹಜ ತಾನೆ?
ಅಯ್ಯೋ.... ಅವನು ಕಚ್ಚುವುದು ಬೇರೆಯವರ ಉಗರನ್ನು!`
 
`ಜಮೀನಿಗೆ ನೀರು ಹಾಯಿಸುವ ಬದಲು ಕೂಲ್‌ ಡ್ರಿಂಕ್ಸ್‌ ಹಾಯಿಸಬೇಕೆಂದಿರುವಿರಂತೆ?
ಹೌದು, ಅದರಲ್ಲಿಯೇ 5 ರಷ್ಟು ಹೆಚ್ಚು ಕೀಟಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿರುವ ಔಷಧಿ ಇದೆ. ಖರ್ಚು ಇದ್ದರೂ ಗುಣಮಟ್ಟವೇ ಮುಖ್ಯ.`

ವೆಬ್ದುನಿಯಾವನ್ನು ಓದಿ