ಥ್ಯಾಂಕ್ಯೂ

ಗುರುವಾರ, 20 ನವೆಂಬರ್ 2014 (16:42 IST)
ರಾಧಾ, ನೋಡಿ ನೀವು ಆಫೀಸಿಗೆ ಪ್ರತಿದಿನ ಮೂವತ್ತು ನಿಮಿಷ ತಡವಾಗಿ ಬರೋದು ನನಗೆ ಹಿಡಿಸೋದಿಲ್ಲ. ಎಂದು ಮ್ಯಾನೇಜರ್ ರೇಗಿದ.
ಸಾರ್, ಐವತ್ತೈದು ವರ್ಷ ನಿಮಗಾಗಿದೆ ಅಂತ ಹೇಳೊಕೆ ಆಗೋಲ್ಲ...ನೀವೂ ಸಿಟ್ಟಾದಾಗಲೂ ಸುಂದರವಾಗಿ ಕಾಣ್ತಿರಾ, ಎಂದವಳು ಹೇಳಿದಾಗ, ಥ್ಯಾಂಕ್ಯೂ ಎಂದು ಮ್ಯಾನೇಜರ್ ಸುಮ್ಮನಾದರು.
 
ಕಂಪನಿಯ ಬಾಸ್ ಮುಂದೆ ಬಂದು ನಿಂತಾಗ ಗುಮಾಸ್ತ ಕೈ ಮುಗಿದು ವಿನಂತಿ ಸಲ್ಲಿಸಿದ, ಸಾರ್ ನಾನು ಮೂರು ಜನರ ಕೆಲಸವನ್ನು ಒಬ್ಬನೆ ಮಾಡ್ತಾ ಇದ್ದೀನಿ, ದಯವಿಟ್ಟು ಸಂಬಳ ಜಾಸ್ತಿ ಮಾಡಿ.
 
ಸದ್ಯಕ್ಕೆ ಸಂಬಳ ಇಷ್ಟೆ ಇರುತ್ತೇ, ಆದರೆ ಆ ಇನ್ನಿಬ್ಬರೂ ಯಾರೂಂತ ಹೇಳಿದರೆ ಅವರನ್ನು ಈಗಿನಿಂದಲೇ ವಜಾ ಮಾಡುತ್ತೇನೆ.
 
ರಂಗ- ನಿಮಗೆ 13ರ ಸಂಖ್ಯೆ ಅಶುಭ ಅಂತ ಅನ್ನಿಸೋಲ್ಲ ತಾನೆ?
ಶ್ಯಾಮ- ಹಾಗೇನಿಲ್ಲ, ಯಾಕೆ?
ರಂಗ- ಇವತ್ತು ತಾರೀಖು 13, ನನಗೆ ಸಾವಿರ ರೂಪಾಯಿ ಸಾಲ ಕೊಟ್ಟಿರ್ತಿರಾ?

ವೆಬ್ದುನಿಯಾವನ್ನು ಓದಿ