ರಜೆ ಕೊಡೊಕೆ ಸಾಧ್ಯವಿಲ್ಲರಿ

ಗುರುವಾರ, 20 ನವೆಂಬರ್ 2014 (16:58 IST)
ಆಫೀಸರ್- ರಜೆ ಕೊಡೊಕೆ ಸಾಧ್ಯವಿಲ್ಲರಿ. 
ಕ್ಲರ್ಕ್- ಸಾರ್, ನನ್ನ ಮದುವೆ ಸಾರ್, ರಜ ಕೊಡದೆ ಇದ್ದರೆ ಹೇಗೆ ಸಾರ್?
ಆಫೀಸರ್- ಮದುವೇನಾ? ನಿನ್ನನ್ನು ಮದುವೆ ಆಗೋಕೆ ಮುಂದೆ  ಬಂದಿರೊ ಮೂರ್ಖಳು ಯಾರಯ್ಯ?
ಕ್ಲರ್ಕ್- ನಿಮ್ಮ ಮಗಳೆ ಸಾರ್.
 
ಯಾಕ್ರೀ, ಬೇರೆ ಊರಿಗೆ ವರ್ಗ ಮಾಡಿದರೆ ಹೋಗೋಕಾಗೊಲ್ಲ ಅಂತಿರಿ? ದೂರ ಆದರೂ ಏನು ಅದು ನಮ್ಮ ರಾಜ್ಯ ತಾನೆ?
ಹೌದು ಸಾರ್, ಆದರೆ ನಾವು ಗಂಡ ಹೆಂಡತಿ ಇನ್ನೂ ಅನ್ಯೊನ್ಯವಾಗಿದ್ದೇವೆ, ಆ ಊರಲ್ಲಿ ಫ್ಯಾಮಿಲಿ ಕ್ವ್ಯಾಟರ್ಸ್ ಇಲ್ಲವಂತೆ ಸಾರ್.
 
ವಿಚಾರಣಾ ಕಿಟಕಿಯ ಬಳಿ ನಿಂತ ಸುಂದರ ತರುಣಿಯ ಬಳಿ ಹೋಗಿ ಸುಂದರ ತರುಣನೊಬ್ಬ ನಿಂತುಕೊಂಡ.
ತರುಣಿ ಮಂದಹಾಸದಿಂದ ನಿನಗೇನು ಬೇಕು? ಎಂದು ಕೇಳಿದಳು.
ನಿನ್ನ ಮನೆಯ ವಿಳಾಸ ಎಂದನಾ ಯುವಕ.
 

ವೆಬ್ದುನಿಯಾವನ್ನು ಓದಿ