ಗುಂಡ ಓದು-ಬರಹ ಅರಿಯದ ಅನಕ್ಷರಸ್ಥ. ಹಾಗಾಗಿ ಪೋಸ್ಟ್ ಆಫೀಸ್‌ಗೆ ಹೋಗಿ ಒಂದು ಪತ್ರ ಬರೆದುಕೊಡುವಂತೆ ಮನವಿ ಮಾಡಿಕೊಂಡ. ಸ್ವಾಮಿ.. ನಮ್ಮನೆ ವಿಳಾಸ ಗೊತ್ತಲ್ಲ ಬರೆಯಿರಿ.. ಎಂದ ಗುಂಡ. ಆಯ್ತು ಎಂದ ಬರೆಯುವವ. ಮನೆಯಲ್ಲಿ ಎಲ್ಲರೂ ಕ್ಷೇಮವಾಗಿದ್ದಾರೆ ಅಂತಾನೂ ಒಳಗೆ ಬರೆಯಿರಿ ಎಂದಾಗಲೂ ಆಯ್ತೆಂದ. ಕೊನೆಗೆ ಗುಂಡ ಹೇಳಿದ, 'ಅಕ್ಷರ ತಪ್ಪುಗಳಿಗೆ ಕ್ಷಮೆಯಿರಲಿ' ಅಂತ ಬರೆಯಿರಿ..!