ಗುಂಡ ತೀರಾ ಡಲ್ ಆಗಿದ್ದ. ಯಾಕೆ ಹೀಗೆಂದು ಹೆಂಡತಿ ಪ್ರಶ್ನಿಸಿದಳು.
'ನಿನಗೆ ನೆನಪಿದೆಯಾ 20 ವರ್ಷಗಳ ಹಿಂದೆ ನಾನು-ನೀನು ಪ್ರೀತಿಸಲು ಆರಂಭಿಸಿದ್ದು?'
'ಓಹೋ, ಖಂಡಿತಾ ನೆನಪಿದೆ. ಇನ್ನೂ ಎಷ್ಟು ಚೆನ್ನಾಗಿ ಆ ದಿನವನ್ನು ನೆನಪಿಟ್ಟುಕೊಂಡಿದ್ದೀರಾ, ನೀವು ತುಂಬಾ ಗ್ರೇಟ್'
'ನಿನ್ನ ತಂದೆಗೆ ನಮ್ಮಿಬ್ಬರ ಪ್ರೀತಿ ತಿಳಿದ ನಂತರ, ನನ್ನ ಮಗಳನ್ನು ಮದುವೆಯಾಗದಿದ್ದರೆ ನಿನ್ನನ್ನು 20 ವರ್ಷ ಜೈಲಿಗೆ ತಳ್ಳುತ್ತೇನೆ ಎಂದು ಬೆದರಿಸಿದ್ದು ನೆನಪಿದೆಯಾ?'
'ಖಂಡಿತಾ ನೆನಪಿದೆ. ಅದೆಲ್ಲಾ ಈಗ್ಯಾಕೆ?'
'ಒಂದು ವೇಳೆ ಆಗ ನಾನು ಜೈಲಿಗೆ ಹೋಗಿದ್ದರೆ, ಇವತ್ತಿಗೆ 20 ವರ್ಷ ಮುಗಿದು ಹೋಗುತ್ತಿತ್ತು. ಇಂದು ಜೈಲಿನಿಂದ ಬಿಡುಗಡೆಗೊಳ್ಳುತ್ತಿದ್ದೆ'..!