ಟರ್ಕಿ : 11 ಗಂಟೆ ಅವಧಿಯಲ್ಲಿ 3 ಪ್ರಬಲ ಭೂಕಂಪ

ಭಾನುವಾರ, 12 ಫೆಬ್ರವರಿ 2023 (10:02 IST)
1939ರಲ್ಲಿ ಟರ್ಕಿಯಲ್ಲೇ ಎರ್ಜಿಂಕನ್ನಲ್ಲಿ ಪ್ರಬಲ ಭೂಕಂಪ ಉಂಟಾಗಿತ್ತು. ಆ ವೇಳೆ 33,000 ಮಂದಿ ಬಲಿಯಾಗಿದ್ದರು. ಅದಾದ ದಶಕಗಳ ಬಳಿಕ ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪ ಇದಾಗಿದೆ. ಫೆ.6 ರಂದು ದಕ್ಷಿಣ ಟರ್ಕಿ ಪ್ರಾಂತ್ಯದ ಒಸ್ಮಾನಿಯೆದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತು.
 
ಮತ್ತೆ 2ನೇ ಭೂಕಂಪವು ಮಧ್ಯಾಹ್ನದ ವೇಳೆಗೆ ಸಂಭವಿಸಿತು. ಆಗ ತೀವ್ರತೆ 7.5 ರಷ್ಟು ದಾಖಲಾಯಿತು. ಪುನಃ ಸಂಜೆ ವೇಳೆಗೆ 6.0 ತೀವ್ರತೆಯ ಮತ್ತೊಂದು ಭೂಕಂಪ ಉಂಟಾಯಿತು. ಇದೇ ವೇಳೆ ಸಿರಿಯಾದಲ್ಲೂ ಭೂಕಂಪ ಸಂಭವಿಸಿತು.

ಕೇವಲ 11 ಗಂಟೆಗಳ ಅವಧಿಯಲ್ಲಿ ಒಂದರ ಹಿಂದೆ ಒಂದರಂತೆ ಭೂಕಂಪವಾಗಿ ಅಪಾರ ಪ್ರಮಾಣದ ಜೀವ, ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಯಿತು. ಟರ್ಕಿ, ಸಿರಿಯಾ ದೇಶಗಳಲ್ಲಿ ಭೂಕಂಪ ಅನ್ನೋದು ಸಾಮಾನ್ಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ