ಗ್ರಾಹಕರಿಗೆ ಬಂಪರ್ ಆಫರ್ ನೀಡಿದ ವೊಡಾಫೋನ್​ , ಐಡಿಯಾ

ಶನಿವಾರ, 3 ಆಗಸ್ಟ್ 2019 (06:50 IST)
ನವದೆಹಲಿ : ವೊಡಾಫೋನ್​ ಐಡಿಯಾ ಸಂಸ್ಥೆ ತನ್ನ ಗ್ರಾಹಕರಿಗಾಗಿ 45ರೂ. ಗಳ ಕಡಿಮೆ ಮಾಸಿಕ ಶುಲ್ಕದ ರಿಚಾರ್ಜ್​ ಪ್ಲಾನ್​ ನ್ನು ಬಿಡುಗಡೆ ಮಾಡಿದೆ.




ಜಿಯೋ ಮಾರುಕಟ್ಟೆಗೆ ಕಾಲಿಟ್ಟ ನಂತರ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾದ ಐಡಿಯಾ ಮತ್ತು ವೊಡಾಫೋನ್​ಗಳು ಟೆಲಿಕಾಂಕ್ಷೇತ್ರದಲ್ಲಿ ಗಟ್ಟಿಯಾದ ನೆಲೆಕಂಡುಕೊಳ್ಳಲು ಎರಡು ವಿಲೀನಗೊಳ್ಳುವುದಾಗಿ ಘೋಷಿಸಿ ಹೊಸ ಹೊಸ ಆಫರ್ ಗಳನ್ನು ಬಿಡುಗಡೆ ಮಾಡಿದವು.


ಆದರೆ ಮಾರ್ಚ್ ಅಂತ್ಯದ ತ್ರೈಮಾಸಿಕ ಅವಧಿಯಲ್ಲಿ 33.41 ಕೋಟಿ ಬಳಕೆದಾರರನ್ನು ಹೊಂದಿದ್ದ ವೊಡಾಫೋನ್​ ಹಾಗೂ ಐಡಿಯಾ ಜೂನ್​ ಅಂತ್ಯಕ್ಕೆ 32 ಕೋಟಿಗೆ ಇಳಿದಿತ್ತು. ಇದೀಗ ಗ್ರಾಹಕರನ್ನು ಉಳಿಸಿಕೊಳ್ಳುವ ಸಲುವಾಗಿ ವೊಡಾಫೋನ್​ ಐಡಿಯಾ ಕಡಿಮೆ ಮಾಸಿಕ ಶುಲ್ಕದ ಈ ಹೊಸ ಪ್ಲಾನ್​ ನ್ನು ಬಿಡುಗಗಡೆ ಮಾಡಿದೆ. ಈ 45ರೂ. ಗಳ ಪ್ಲಾನ್ ನಲ್ಲಿ 70 ನಿಮಿಷಗಳ ಟಾಕ್​ ಟೈಮ್​ ಅನ್ನು ಉಚಿತವಾಗಿ ನೀಡುತ್ತಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ