ಶೀಘ್ರದಲ್ಲೇ ಬಿಎಸ್ ಎನ್ ಎಲ್ ಅಗ್ಗದ ಫೋನ್ ಗಳು ಮಾರುಕಟ್ಟೆಗೆ

ಮಂಗಳವಾರ, 19 ಸೆಪ್ಟಂಬರ್ 2017 (09:24 IST)
ನವದೆಹಲಿ: ರಿಲಯನ್ಸ್ ಜಿಯೋ ಫೋನ್ ಈಗಾಗಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಏರ್ ಟೆಲ್ ದೀಪಾವಳಿ ಸಂದರ್ಭದಲ್ಲಿ ಅಗ್ಗದ ಬೆಲೆಯ 4 ಜಿ ಫೋನ್ ಘೋಷಣೆ ಮಾಡುವುದಾಗಿ ಹೇಳಿದೆ. ಇದೀಗ ಸರ್ಕಾರಿ ಸಾಮ್ಯದ ಬಿಎಸ್ಎನ್ ಎಲ್ ಸರದಿ.

 
ಖಾಸಗಿ ಮೊಬೈಲ್ ತಯಾರಿಕಾ ಸಂಸ್ಥೆಯಾದ ಲಾವಾ ಮತ್ತು ಮೈಕ್ರೋಮ್ಯಾಕ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬಿಎಎಸ್ಎನ್ಎಲ್ ಅಗ್ಗದ ಬೆಲೆಯ ಫೀಚರ್ ಫೋನ್ ಗಳನ್ನು ಗ್ರಾಹಕರಿಗೆ ಒದಗಿಸಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳು ಇದು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

ಅಂದಾಜಿ ಬೆಲೆ 2000 ರೂ.ಗೆ ಗ್ರಾಹಕರಿಗೆ ಒದಗಿಸಲು ಸಂಸ್ಥೆ ಚಿಂತನೆ ನಡೆಸಿದೆ ಎಂದು ಬಿಎಸ್ಎನ್ಎಲ್ ಅಧ್ಯಕ್ಷ  ಅನುಪಮ್ ಶ್ರೀವಾಸ್ತವ್ ಹೇಳಿದ್ದಾರೆ. ಉಚಿತ ಕರೆ ಸೌಲಭ್ಯ ಒದಗಿಸುವ ಚಿಂತನೆಯಲ್ಲಿ ಸಂಸ್ಥೆಯಿದೆ. ಇದರಿಂದ ಫೋನ್ ಮಾರುಕಟ್ಟೆಯಲ್ಲಿ ಮತ್ತಷ್ಟು ಪೈಪೋಟಿ ಶುರುವಾಗುವುದು ಖಂಡಿತಾ.

ಇದನ್ನೂ ಓದಿ…  ರಾಘವೇಶ್ವರ ಶ್ರೀಗಳಿಗೂ ಗೌರಿ ಲಂಕೇಶ್ ಹತ್ಯೆಗೂ ಸಂಬಂಧವಿಲ್ಲ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ