ಬೆಂಗಳೂರು: ಅಡಿಕೆ ಬೆಲೆಯಲ್ಲಿ ನಿನ್ನೆ ಕೊಂಚ ಏರಿಕೆಯಾಗಿದೆ. ಇಂದು ಮತ್ತೆ ಯಥಾಸ್ಥಿತಿಯಲ್ಲಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.
ದೀಪಾವಳಿ ನಂತರ ಅಡಿಕೆ ಬೆಳೆಗಾರರಿಗೆ ಬೆಲೆ ಏರಿಕೆ ಕೊಂಚ ಸಮಾಧಾನ ತಂದಿತ್ತು. ಆದರೆ ನಿನ್ನೆ ಮತ್ತೆ ಅಡಿಕೆ ಬೆಲೆಯಲ್ಲಿ ಮತ್ತೆ ಕೊಂಚ ಏರಿಕೆಯಾಗಿತ್ತು. ಹೊಸ ಅಡಿಕೆ ಬೆಲೆ 10 ರೂ. ಏರಿಕೆಯಾಗಿ 370 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆಯೂ ನಿನ್ನೆ 10 ರೂ. ಏರಿಕೆಯಾಗಿ ಇಂದು 520 ರೂ. ಗಳಷ್ಟಿತ್ತು. ಇಂದೂ ಅಷ್ಟೇ ಇದೆ. ಇನ್ನು ಡಬಲ್ ಚೋಲ್ ಬೆಲೆ ಯಥಾಸ್ಥಿತಿಯಲ್ಲಿದ್ದು 535 ರೂ.ಗಳಷ್ಟಾಗಿದೆ.
ಹೊಸ ಪಟೋರ ದರ ಮತ್ತು ಹಳೆ ಪಟೋರ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಹೊಸ ಪಟೋರ ದರ 300 ರೂ. ಗಳಷ್ಟಿದ್ದರೆ ಹಳೇ ಪಟೋರ ದರ 400 ರೂ.ಗಳಷ್ಟಿದೆ. ಹೊಸ ಉಳ್ಳಿ ದರದಲ್ಲಿ ಮೊನ್ನೆ ಏರಿಕೆಯಾಗಿತ್ತು. ಇಂದು ಯಥಾಸ್ಥಿತಿಯಲ್ಲಿದ್ದು ಹೊಸ ಉಳ್ಳಿ ದರ 200 ರೂ. ಗಳಷ್ಟಿದ್ದರೆ ಹಳೆ ಉಳ್ಳಿ ದರ 255 ರೂ.ಗಳಾಗಿದೆ.
ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ಬೆಲೆ ಇದೀಗ 675 ರೂ.ಗಳಷ್ಟಾಗಿದೆ. ಒಣ ಕೊಬ್ಬರಿ ಬೆಲೆ ಹಲವು ದಿನಗಳಿಂದ ಯಥಾಸ್ಥಿತಿಯಲ್ಲಿದ್ದು 245 ರೂ.ಗಳಷ್ಟಾಗಿದೆ.