ಇನ್ನು ಮುಂದೆ ಆಧಾರ್ ಪ್ರತಿಯೊಂದನ್ನೇ ಬಳಸಿ ಬ್ಯಾಂಕ್‌ಗಳು ಗ್ರಾಹಕರ ಖಾತೆಗಳನ್ನು ತೆರೆಯುವಂತಿಲ್ಲ
ಗುರುವಾರ, 23 ಆಗಸ್ಟ್ 2018 (11:39 IST)
ಬೆಂಗಳೂರು : ಗ್ರಾಹಕರ ಬ್ಯಾಂಕ್ ಖಾತೆಯನ್ನು ತೆರೆಯುವ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ಬ್ಯಾಂಕ್ ಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ(ಯುಐಡಿಎಐ) ಸೂಚನೆಯೊಂದನ್ನು ನೀಡಿದೆ.
ಯಾವುದೇ ಗ್ರಾಹಕರ ಆಧಾರ್ ಪ್ರತಿಯನ್ನು ಬಳಸಿ ನಕಲಿ ಖಾತೆ ಹೊಂದಲು ಯಾರಿಗೂ ಸಾಧ್ಯವಿಲ್ಲ. ಒಂದುವೇಳೆ ಗ್ರಾಹಕರ ಆಧಾರ್ ಪ್ರತಿ ಅಥವಾ ಜೆರಾಕ್ಸ್ ಪ್ರತಿಯನ್ನು ಬಳಸಿ ನಕಲಿ ಬ್ಯಾಂಕ್ ಖಾತೆಯನ್ನು ತೆರೆದರೆ ಅದಕ್ಕೆ ಬ್ಯಾಂಕ್‌ಗಳೇ ಹೊಣೆಯಾಗುತ್ತದೆ ಎಂದು ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ(ಯುಐಡಿಎಐ) ಹೇಳಿದೆ.
ಪಿಎಂಎಲ್ ನೀತಿ ಹಾಗೂ ಆರ್‌ಬಿಐ ಸುತ್ತೋಲೆ ಪ್ರಕಾರ ಆಧಾರ್ ಪ್ರತಿಯೊಂದನ್ನೇ ಬ್ಯಾಂಕ್‌ಗಳು ಗ್ರಾಹಕರ ಖಾತೆಗಳನ್ನು ತೆರೆಯಬಾರದು. ಬ್ಯಾಂಕ್ ಖಾತೆ ತೆರೆಯಲು ಗ್ರಾಹಕರ ಬಯೋಮೆಟ್ರಿಕ್ ಅಥವಾ ಒಟಿಪಿ ಅಗತ್ಯವಿದೆ. ಒಂದು ವೇಳೆ ಇದನ್ನು ಪಾಲಿಸದೇ ಖಾತೆ ತೆರೆಯಲು ಅವಕಾಶ ನೀಡಿದರೆ ಅದು ಬ್ಯಾಂಕ್‌ನ ಜವಾಬ್ದಾರಿಯಾಗಿರುತ್ತದೆ. ಆಧಾರ್ ಹೊಂದಿರುವ ವ್ಯಕ್ತಿಯನ್ನು ಹೊಣೆಗಾರನನ್ನಾಗಿ ಮಾಡಲು ಸಾಧ್ಯವಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ