ಏಳು ಸಾವಿರ ಕೋಟಿ ದಾನಕ್ಕೆ ಮುಂದಾದ ಭಾರ್ತಿ ಏರಟೆಲ್

ಶುಕ್ರವಾರ, 24 ನವೆಂಬರ್ 2017 (09:08 IST)
ಭಾರ್ತಿ ಏರಟೆಲ್ ಸಮೂಹದ ಮುಖ್ಯಸ್ಥ ಸುನಿಲ್ ಮಿತ್ತಲ ಅವರ ಕುಟುಂಬ ಸಾಮಾಜಿಕ ಕಾರ್ಯಗಳಿಗೆ ಅಂದಾಜು ಏಳು ಸಾವಿರ ಕೋಟಿ ಹಣ ದಾನ ಮಾಡಲು ಮುಂದಾಗಿದೆ.

ಸಮೂಹ ಭಾರ್ತಿ ಫೌಂಡೇಶನ್ ಮೂಲಕ ನಡೆಸುವ ಸಾಮಾಜಿಕ ಕಾರ್ಯಗಳಿಗೆ ಈ ಹಣ ವಿನಿಯೋಗಿಸಲಾಗುತ್ತಿದೆ. ದೇಶದ ಶೈಕ್ಷಣಿಕ ಅಭಿವೃದ್ಧಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರ ಕಲ್ಯಾಣಕ್ಕೆ ಬಳಕೆ ಮಾಡಲಿದೆ.

ಈ ಹಿಂದಿನಿಂದಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಭಾರ್ತಿ ಏರಟೆಲ್ ಇನ್ನು ಮುಂದೆಯೂ ಇಂತಹ ಕಾರ್ಯಗಳನ್ನು ಕೈಗೊಳ್ಳಲಿದೆ ಎಂದು ಸುನಿಲ್ ಮಿತ್ತಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ