ಐಡಿಎಫ್‌ಸಿ ಜತೆ ಪೇಮಂಟ್ ಬ್ಯಾಂಕ್ ಸ್ಥಾಪನೆ ಯೋಜನೆ ಕೈಬಿಟ್ಟ ದಿಲೀಪ್ ಶಾಂಘ್ವಿ

ಶನಿವಾರ, 21 ಮೇ 2016 (13:55 IST)
ಭಾರತದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ದಿಲೀಪ್ ಶಾಂಘ್ವಿ ತಾವು ಭಾರತೀಯ ಹಣಕಾಸು ಸಂಸ್ಥೆ ಐಡಿಎಫ್‌ಸಿ ಬ್ಯಾಂಕ್ ಜತೆ ಜಂಟಿಯಾಗಿ ಪೇಮಂಟ್ ಬ್ಯಾಂಕ್ ಸ್ಥಾಪಿಸುವ ಯೋಜನೆ ಕೈಬಿಟ್ಟಿರುವುದಾಗಿ ಶುಕ್ರವಾರ ತಿಳಿಸಿದರು. 
ದಿಲೀಪ್ ಶಾಂಘ್ವಿ ಮತ್ತು ಅಸೋಸಿಯೇಟ್ಸ್ ಕಂಪನಿ ಶಾಂಘ್ವಿ ಕಂಪನಿ ಪೇಮಂಟ್ಸ್ ಬ್ಯಾಂಕ್ ಸ್ಥಾಪನೆಗೆ ಲೈಸನ್ಸ್ ಪಡೆದ 11 ಸಂಸ್ಥೆಗಳ ಪೈಕಿ ಒಂದಾಗಿತ್ತು. 
 
ಅರ್ಧಕ್ಕಿಂತ ಕಡಿಮೆ ಪ್ರೌಢವಯಸ್ಕ  ಜನಸಂಖ್ಯೆ ಬ್ಯಾಂಕ್ ಖಾತೆ ಹೊಂದಿರುವ ಭಾರತದಲ್ಲಿ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಿಸುವ ಉದ್ದೇಶದೊಂದಿಗೆ ಪೇಮಂಟ್ ಬ್ಯಾಂಕ್ ಸ್ಥಾಪನೆಗೆ ಅನುಮತಿ ನೀಡಲಾಗಿದೆ. 
 
ಸನ್ ಫಾರ್ಮಾಕ್ಯುಟಿಕಲ್ ಇಂಡಸ್ಟ್ರೀಸ್ ಲಿ.ನ ಅತೀ ದೊಡ್ಡ ಔಷಧಿ ತಯಾರಿಕೆ ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯಸ್ಥರಾಗಿರುವ ಶಾಂಘ್ವಿ ಜಂಟಿ ಉದ್ಯಮ ಸ್ಥಾಪನೆಗೆ ಚೌಕಟ್ಟು ರೂಪಿಸಲು ಕಳೆದ 8 ತಿಂಗಳಲ್ಲಿ ಐಡಿಎಫ್‌ಸಿ ಮತ್ತು ಟೆಲೆನಾರ್ ಜತೆ ಕೆಲಸ ಮಾಡಿದ್ದಾಗಿ ಹೇಳಿದರು. ಆದರೆ ಈ ಯೋಜನೆ ಕೈಬಿಡಲು ಪರಸ್ಪರ ಸಮ್ಮತಿಸಿದ್ದರಿಂದ ಪೇಮಂಟ್ ಬ್ಯಾಂಕ್ ಪರವಾನಗಿಗೆ ಪ್ರಯತ್ನಿಸಲಾಗುವುದಿಲ್ಲ ಎಂದು ಶಾಂಘ್ವಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ