ಜಿಯೋ ಗಿಗಾ ಫೈಬರ್ ಸೇವೆಯ ನೋಂದಣಿ ಮಾಡಿಕೊಳ್ಳುವುದು ಹೇಗೆ ಗೊತ್ತಾ?

ಬುಧವಾರ, 4 ಸೆಪ್ಟಂಬರ್ 2019 (08:50 IST)
ನವದೆಹಲಿ : ಗ್ರಾಹಕರು ಕಾತುರದಿಂದ ಕಾಯುತ್ತಿದ್ದ ರಿಲಾಯನ್ಸ್ ಜಿಯೋ ಗಿಗಾ ಫೈಬರ್ ಇಂಟರ್ ನೆಟ್ ಸೇವೆ ಆರಂಭವಾಗಿದ್ದು, ಆದರೆ ಇದು ಸದ್ಯಕ್ಕೆ ಕೆಲವು ನಗರಗಳಲ್ಲಿ ಮಾತ್ರ ಸಿಗಲಿದೆ ಎನ್ನಲಾಗಿದೆ.
ಜಿಯೋ ಗಿಗಾ ಫೈಬರ್​ ಸೇವೆಯು ಹೈದರಾಬಾದ್, ಮುಂಬೈ, ಅಹಮದಾಬಾದ್, ಸೂರತ್, ಡೆಲ್ಲಿ, ಜೈಪುರ, ಕೋಲ್ಕತಾ, ವಡೋದರ ಮತ್ತು ವಿಶಾಖಪಟ್ಟಣಂ ಹಾಗೂ ಇತರ ನಗರಗಳಲ್ಲಿ ಶೀಘ್ರವೇ ದೊರೆಯಲಿದೆ. ಗಿಗಾಫೈಬರ್​ ಸೇವೆಯು ಮೊದಲ ಹಂತದಲ್ಲಿ ಗುಜರಾತ್, ಡೆಲ್ಲಿ, ತೆಲಂಗಾಣ, ರಾಜಸ್ಥಾನ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಸಿಗಲಿದೆ. ಅಂತೆಯೇ ಎರಡನೇ ಹಂತದಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಿಗೆ ದೊರೆಯಲಿದೆ. ಉಳಿದ ರಾಜ್ಯಗಳಲ್ಲಿ ನಂತರದ ಹಂತಗಳಲ್ಲಿ ಜಿಯೋ ಸೇವೆ ಲಭ್ಯವಾಲಿದೆ.


ರಿಲಯನ್ಸ್ ಜಿಯೋ ಗಿಗಾಫೈಬರ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಗ್ರಾಹಕರು ನೊಂದಣಿ  ಮಾಡಿಕೊಳ್ಳಲು ಬಯಸುವ ಗ್ರಾಹಕರು ಹತ್ತಿರದ ರಿಲಯನ್ಸ್ ಜಿಯೋ ಸ್ಟೋರ್ ಗೆ ಹೋಗಿ ಹೊಸ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದು. ಮೊದಲ 90 ದಿನ ಯಾವುದೇ ಶುಲ್ಕವಿಲ್ಲದೆ ‘ವೆಲ್‌ ಕಮ್​ ಆಫರ್’ ಮೂಲಕ ಜಿಯೋ ಸೇವೆಗಳನ್ನು ಆನಂದಿಸಬಹುದಾಗಿದೆ. ಗ್ರಾಹಕರಿಗಾಗಿ 4,500 ರೂ. ಅಥವಾ 2,500 ರೂ. ಎರಡು ಪ್ಯಾಕೇಜ್ ನಲ್ಲಿ ಸೇವೆ ದೊರೆಕುತ್ತದೆ. ರಿಲಾಯನ್ಸ್​ ಗಿಗಾ ಫೈಬರ್​ ಸೇವೆಯ ಕುರಿತಾಗಿ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ