ನವದೆಹಲಿ: ದೇಶಾದ್ಯಂತ ಗೋ ಹತ್ಯೆ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದಕ್ಕೆ ಬಿಜೆಪಿಯೇತರ ರಾಜ್ಯಗಳು ವಿರೋಧವನ್ನೂ ವ್ಯಕ್ತಪಡಿಸಿದ್ದವು. ಗೋ ಹತ್ಯೆ ನಿಷೇಧಿಂದಾಗಿ ದನ ಕರುಗಳ ಮಾರಾಟದ ಮೇಲೆ ಹಲವು ನಿರ್ಬಂಧ ವಿಧಿಸಲಾಗಿದೆ. ಇದರ ಪರಿಹಾರಕ್ಕೆ ರಾಜಸ್ಥಾನ ಸರ್ಕಾರ ಒಂದು ವಿನೂತನ ಪ್ರಯತ್ನ ನಡೆಸಿದೆ.
ಈಗ ಆನ್ ಲೈನ್ ಮಾರಾಟ ಪ್ರಕ್ರಿಯೆ ಜನಪ್ರಿಯವಾಗಿರುವ ಹಿನ್ನಲೆಯಲ್ಲಿ ಪಶುಗಳನ್ನೂ ರಾಜಸ್ಥಾನ ಸರ್ಕಾರ, ಪ್ರಮುಖ ಆನ್ ಲೈನ್ ಡೀಲರ್ ಗಳಾದ ಒಎಲ್ಎಕ್ಸ್, ಕ್ವಿಕರ್ ಮೂಲಕ ಮಾರಾಟ ಅಥವಾ ಖರೀದಿ ಮಾಡಲು ಅವಕಾಶ ನೀಡಲಿದೆ.
ಹೀಗಾಗಿ ಇನ್ನು ಮುಂದೆ ಒಎಲ್ಎಕ್ಸ್ ಮತ್ತು ಕ್ವಿಕರ್ ನಲ್ಲಿ ಮಾರಾಟಕ್ಕಿರುವ ಪಶುಗಳನ್ನೂ ಕಾಣಬಹುದಾಗಿದೆ. ಗೋ ರಕ್ಷಣೆ ಹೆಸರಿನಲ್ಲಿ ದಾಂಧಲೆ ನಡೆಸುವ ಗುಂಪನ್ನು ಹತ್ತಿಕ್ಕಲು ಮತ್ತು ಅಕ್ರಮ ಮಾರಾಟ ತಪ್ಪಿಸಲು ಸರ್ಕಾರ ಆನ್ ಲೈನ್ ಮಾರಾಟಕ್ಕೆ ಹಸಿರು ನಿಶಾನೆ ತೋರಿದೆ. ಇದು ಇನ್ನು ದೇಶಾದ್ಯಂತ ಜಾರಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ. ಇನ್ನಿತರ ವಸ್ತುಗಳಂತೆ ಗೋವುಗಳ ಫೋಟೋ ಹಾಗೂ ಇನ್ನಿತರ ವಿವರಗಳು ಲಭ್ಯವಿರಲಿದೆ. ಇದರಿಂದ ಮಧ್ಯವರ್ತಿಗಳ ಕಾಟವೂ ತಪ್ಪುತ್ತದೆ ಎನ್ನುವುದು ಸರ್ಕಾರದ ಆಲೋಚನೆ.