ಮೇ 1 ರಿಂದ ಪ್ರತಿದಿನ ಪೆಟ್ರೋಲ್, ಡೀಸೆಲ್‌ ದರ ಪರಿಷ್ಕರಣೆ

ಬುಧವಾರ, 12 ಏಪ್ರಿಲ್ 2017 (16:03 IST)
ವಿಶ್ವದ ಪ್ರಮುಖ ದೇಶಗಳಂತೆ ಇದೀಗ ಭಾರತದಲ್ಲೂ ಪ್ರತಿದಿನ ಪೆಟ್ರೋಲ್, ಡೀಸೆಲ್‌ ಖರೀದಿಸುವ ಗ್ರಾಹಕರು ಹೊಸ ಬೆಲೆಯನ್ನು ತೆರಬೇಕಾಗುತ್ತದೆ.   
 
ಮುಂಬರುವ ಮೇ 1 ರಿಂದ ಗ್ರಾಹಕರು ಪೆಟ್ರೋಲ್, ಡೀಸೆಲ್ ಖರೀದಿಸಬೇಕಾದಲ್ಲಿ ಅಂದಿನ ಹೊಸ ದರವನ್ನೇ ಪಾವತಿಸಿ ಖರೀದಿಸಬೇಕಾಗುತ್ತದೆ.
 
ದೇಶದಲ್ಲಿ 58 ಸಾವಿರ ಪೆಟ್ರೋಲ್ ಪಂಪ್‌ಗಳನ್ನು ಹೊಂದಿರುವ ಸರಕಾರಿ ಸ್ವಾಮ್ಯದ ತೈಲ ಕಂಪೆನಿಯಾದ ಇಂಡಿಯನ್ ಆಯಿಲ್ ಕಾರ್ಪೋರೇಶನ್(ಐಓಸಿ), ಭಾರತ್ ಪೆಟ್ರೋಲೀಯಂ ಕಾರ್ಪೋರೇಶನ್ ಲಿಮಿಟೆಡ್(ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲೀಯಂ ಕಾರ್ಪೋರೇಶನ್ ಲಿಮಿಟೆಡ್(ಎಚ್‌ಪಿಸಿಎಲ್) ಕಂಪೆನಿಗಳು ಮೇ 1 ರಿಂದ ಆಯ್ದ ಐದು ನಗರಗಳಲ್ಲಿ ನೂತನ ದರ ನಿಯಮ ಜಾರಿಗೊಳಿಸಲಾಗುತ್ತಿದೆ, ನಂತರ ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ತೈಲ ಕಂಪೆನಿಗಳು ತಿಳಿಸಿವೆ.     
 
ದಕ್ಷಿಣ ಭಾರತದಲ್ಲಿ ಪಾಂಡಿಚೇರಿ, ವಿಶಾಖಪಟ್ಟಣಂ, ಪಶ್ಚಿಮ ಭಾರತದಲ್ಲಿ ಉದಯಪುರ್, ಪೂರ್ವಭಾರತದಲ್ಲಿ ಜಮ್‌ಶೆಡ್‌ಪುರ್, ಉತ್ತರ ಭಾರತದಲ್ಲಿ ಚಂಡೀಗಡ್‌ ನಗರಗಳನ್ನು ಆಯ್ಕೆ ಮಾಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ