Gold Price today: ಯುದ್ಧದ ಕಾರ್ಮೋಡದ ನಡುವೆ ಚಿನ್ನದ ದರ ಏರಿಕೆಯ ಶಾಕ್

Krishnaveni K

ಬುಧವಾರ, 7 ಮೇ 2025 (11:17 IST)
ಬೆಂಗಳೂರು: ಒಂದೆಡೆ ಪಾಕಿಸ್ತಾನದ ಜೊತೆ ಯುದ್ಧದ ಕಾರ್ಮೋಡವಿದ್ದರೆ ಇನ್ನೊಂದೆಡೆ ಭಾರತದಲ್ಲಿ ಚಿನ್ನದ ದರ ಶಾಕ್ ಸಿಕ್ಕಿದೆ. ಪರಿಶುದ್ಧ ಚಿನ್ನದ ಬೆಲೆ ಇಂದು ಮತ್ತೆ ಲಕ್ಷದ ಗಡಿ ದಾಟಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಹಬ್ಬ ಮುಗಿದ ಬೆನ್ನಲ್ಲೇ ಚಿನ್ನದ ದರ ಸತತ ಎರಡು ದಿನ ಇಳಿಕೆಯಾಗಿತ್ತು. ಕಳೆದ ವಾರದಲ್ಲಿ ಒಮ್ಮೆ ಚಿನ್ನದ ಬೆಲೆ ಲಕ್ಷದ ಗಡಿ ದಾಟಿ ದಾಖಲೆ ಮಾಡಿತ್ತು. ಆದರೆ ಈಗ ಚಿನ್ನದ ದರ ಮತ್ತೊಮ್ಮೆ ಲಕ್ಷದ ಗಡಿ ದಾಟಿ ಶಾಕ್ ನೀಡಿದೆ. ಚಿನ್ನದ ಬೆಲೆ ಇಳಿಕೆಯಾಗಬಹುದು ಎಂದು ನಿರೀಕ್ಷಿಸಿದ್ದ ಗ್ರಾಹಕರಿಗೆ ಇಂದಿನ ಬೆಲೆ ಶಾಕ್ ಆಗುವಂತಿದೆ. ಇಂದು ಚಿನ್ನದ ದರ ಏರಿಕೆಯಾಗಿದ್ದು 1,00,285.00 ರೂ.ಗೆ ಬಂದು ನಿಂತಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಏರಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 50 ರೂ. ಏರಿಕೆಯಾಗಿದ್ದು 9,075 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 54 ರೂ. ಏರಿಕೆಯಾಗಿದ್ದು 9,900 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 41 ಏರಿಕೆಯಾಗಿದ್ದು 7,425 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ದರವೂ ದರ ಮೊನ್ನೆಯಿಂದ ಇಳಿಕೆಯತ್ತ ಸಾಗಿತ್ತು.  ಆದರೆ ಇಂದು ಬೆಳ್ಳಿ ದರ ಭಾರೀ ಏರಿಕೆಯಾಗಿದೆ. ಇಂದು ಪ್ರತೀ ಕೆ.ಜಿ. ಬೆಳ್ಳಿ ಬೆಲೆ 2,100 ರೂ. ನಷ್ಟು ಏರಿಕೆಯಾಗಿದ್ದು ಇಂದು 99,000 ರೂ.ಗಳಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ