ಹೊಸದಾಗಿ ಮನೆ ಕಟ್ಟೋರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

ಶನಿವಾರ, 6 ಏಪ್ರಿಲ್ 2019 (07:44 IST)
ನವದೆಹಲಿ : ಗೃಹ ಸಾಲದ ಬಡ್ಡಿದರಗಳನ್ನು ಇಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಆ ಮೂಲಕ ಹೊಸದಾಗಿ ಮನೆ ಕಟ್ಟೋರಿಗೆ, ಖರೀದಿಸುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.


ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಆರಂಭವಾಗಿದೆ. ಈ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್‍ 2ನೇ ಬಾರಿಗೆ ರೆಪೋ ದರಗಳನ್ನು 25 ರಷ್ಟು ಕಡಿಮೆ ಮಾಡಿದೆ.


ಈ ಹಿನ್ನಲೆಯಲ್ಲಿ ಗೃಹ ಸಾಲದ ಬಡ್ಡಿದರಗಳನ್ನು ಇಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು. ಈ ಮೂಲಕ ಮನೆ ಬಾಡಿಗೆಗಿಂತಲೂ ಗೃಹ ಸಾಲದ ಮಾಸಿಕ ಕಂತು ಕಡಿಮೆ ಮಾಡುವುದು ಸರ್ಕಾರದ ಗುರಿ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಹಾಗೇ ಬ್ಯಾಂಕ್‍ ಗಳು ಕೂಡಾ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದಲ್ಲಿ, ಗೃಹ ಸಾಲದ ಬಡ್ಡಿದರ ಕಡಿಮೆಯಾಗಲಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ