ತೆರಿಗೆ ಪಾವತಿದಾರರಿಗೊಂದು ಸಿಹಿಸುದ್ದಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಣೆ

ಶುಕ್ರವಾರ, 27 ಜುಲೈ 2018 (07:37 IST)
ನವದೆಹಲಿ : ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಗೆ ನಿಗದಿಪಡಿಸಿದ್ದ ಕೊನೆ ದಿನಾಂಕವನ್ನು ಒಂದು ತಿಂಗಳ ಕಾಲ ಮುಂದೂಡಿದೆ ಎಂದು ಹೇಳುವುದರ ಮೂಲಕ ತೆರಿಗೆ ಪಾವತಿದಾರರಿಗೆ ಸಿಹಿಸುದ್ದಿ ನೀಡಿದೆ.


ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಕೊನೆಯ ದಿನಾಂಕವನ್ನು ಜುಲೈ 31 ರಿಂದ ಆಗಸ್ಟ್ 31 ರವರೆಗೆ ಸರಕಾರ ವಿಸ್ತರಿಸಿದೆ. ಈ ವಿಚಾರವನ್ನು ಹಣಕಾಸು ಸಚಿವಾಲಯ ಟ್ವೀಟ್  ಮಾಡುವುದರ ಮೂಲಕ ತಿಳಿಸಿದೆ.


ಇನ್ನೊಂದು ತಿಂಗಳು ಕಾಲಾವಕಾಶ ಸಿಕ್ಕಿದ್ದು, ಪರಿಷ್ಕೃತ ಆದೇಶದ ಪ್ರಕಾರ ಆಗಸ್ಟ್‌ 31 ಆದಾಯ ತೆರಿಗೆ ಸಲ್ಲಿಕೆಗೆ ಕೊನೆ ದಿನಾಂಕವಾಗಿರುತ್ತದೆ. ಒಟ್ಟಿನಲ್ಲಿ ತೆರಿಗೆ ಪಾವತಿಸುವವರಿಗೆ ಅನುಕೂಲವಾಗದ್ದು, ನಿಗದಿತ ದಿನಾಂಕದ ನಂತರ ಐಟಿಆರ್ ಪಾವತಿಸಿದರೆ ರೂ. 5,000 ವರೆಗೆ ದಂಡ ವಿಧಿಸಲಾಗುತ್ತದೆ ಎಂದಿದು ತಿಳಿಸಲಾಗಿತ್ತು. ಆದರೆ ಈಗ ಗಡುವು ನೀಡಿರುವುದು ತೆರಿಗೆದಾರರಲ್ಲಿ ನೆಮ್ಮದಿ ತರಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ