ಒಂದು ದಿನಕ್ಕೆ ಸೇವಿಂಗ್ಸ್ ಖಾತೆಗೆ ಎಷ್ಟು ಹಣ ಜಮೆ ಮಾಡಬೇಕು ಇಲ್ಲಿದೆ ವಿವರ

Krishnaveni K

ಗುರುವಾರ, 30 ಜನವರಿ 2025 (09:18 IST)
ನವದೆಹಲಿ: ಭಾರತದಲ್ಲಿ ಮಧ್ಯಮ ವರ್ಗದ ಜನರು ಬಹುತೇಕ ಉಳಿತಾಯ ಖಾತೆಯ ಮೇಲೆ ಬಹಳ ಅವಲಂಬಿತರಾಗಿದ್ದಾರೆ. ತಮ್ಮ ದೈನಂದಿನ ವಹಿವಾಟು ನಡೆಸುವ ಸೇವಿಂಗ್ಸ್ ಖಾತೆಗೆ ಒಂದು ದಿನಕ್ಕೆ ಎಷ್ಟು ಹಣ ಜಮೆ ಮಾಡಬಹುದು ಇಲ್ಲಿದೆ ವಿವರ.

ತಮ್ಮ ದೈನಂದಿನ ಖರ್ಚು ವೆಚ್ಚಗಳಿಗಾಗಿ ಉಳಿತಾಯ ಖಾತೆಯಲ್ಲಿ ಹಣವಿಟ್ಟುಕೊಂಡಿರುತ್ತೇವೆ. ಆದರೆ ಉಳಿತಾಯ ಖಾತೆಗೆ ಒಂದು ದಿನಕ್ಕೆ ಇಂತಿಷ್ಟೇ ಹಣ ಜಮೆ ಮಾಡಬಹುದು ಎಂಬ ನಿಯಮವಿದೆ. ಅದಕ್ಕಿಂತ ಹೆಚ್ಚು ಜಮೆ ಮಾಡಬೇಕಾದರೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಕೊಡಬೇಕಾಗುತ್ತದೆ.

ಉಳಿತಾಯ ಖಾತೆಗೆ ಒಂದು ದಿನಕ್ಕೆ 50 ಸಾವಿರ ರೂ.ಗಳಷ್ಟು ಹಣ ಜಮೆ ಮಾಡಬಹುದು. ಒಂದು ವೇಳೆ ಅದಕ್ಕಿಂತ ಹೆಚ್ಚು ಜಮೆ ಮಾಡಬೇಕಾದಲ್ಲಿ ಪ್ಯಾನ್ ಕಾರ್ಡ್ ನೀಡಬೇಕು. ಇಲ್ಲವೇ 60/61 ಫಾರ್ಮ್ ಭರ್ತಿ ಮಾಡಿ ನೀಡಬೇಕಾಗುತ್ತದೆ.

ಉಳಿತಾಯ ಖಾತೆಯಲ್ಲಿ ಒಂದು ಆರ್ಥಿಕ ವರ್ಷದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಹಣವಿಟ್ಟುಕೊಂಡಿದ್ದರೂ ಅದಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಇಲ್ಲವೇ ಆದಾಯ ತೆರಿಗೆ ಇಲಾಖೆ ನಿಮಗೆ ನೋಟಿಸ್ ನೀಡುತ್ತದೆ. ಆಗ ನೀವು ನಿಮ್ಮ ಖಾತೆಯಲ್ಲಿರುವ ಹಣಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಬ್ಯಾಂಕ್ ಸ್ಟೇಟ್ ಮೆಂಟ್, ಹೂಡಿಕೆ ದಾಖಲೆಗಳು, ಪಿತ್ರಾರ್ಜಿತ ದಾಖಲೆಗಳನ್ನು ನೀಡಬೇಕು. ಹೀಗಾಗಿ ಇವುಗಳ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡಿರಬೇಕಾಗಿರುವುದು ಕಡ್ಡಾಯವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ