ನಗದು ವರ್ಗಾವಣೆ ಯೋಜನೆಗೆ IMF ಶ್ಲಾಘನೆ,

ಗುರುವಾರ, 13 ಅಕ್ಟೋಬರ್ 2022 (18:56 IST)
ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಹಣಕಾಸು ವ್ಯವಹಾರಗಳ ವಿಭಾಗದ ಉಪ ನಿರ್ದೇಶಕ ಪಾವೊಲೊ ಮೌರೊ ಅವರು ಭಾರತದ ನಗದು ವರ್ಗಾವಣೆ ಯೋಜನೆಯನ್ನು ಶ್ಲಾಘಿಸಿದ್ದು, ದೇಶದ ಸಂಪೂರ್ಣ ಗಾತ್ರವನ್ನು ಪರಿಗಣಿಸಿ ಇದನ್ನು ಆರ್ಥಿಕ ಮೂಲಸೌಕರ್ಯಗಳ ಅದ್ಭುತ ಎಂದು ಬಣ್ಣಿಸಿದ್ದಾರೆ. ಇದರೊಂದಿಗೆ ಭಾರತದಿಂದ ಕಲಿಯಲು ಬಹಳಷ್ಟಿದೆ ಎಂಬುದಕ್ಕೆ ಜಾಗತಿಕ ಸಾಲದಾತರು ಹಲವಾರು ಉದಾಹರಣೆಗಳನ್ನು ಹೊಂದಿದ್ದಾರೆ ಎಂದು ಹೇಳಿದರು. ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್ ಗ್ರೂಪ್​​​​ನ ಆಡಳಿತ ಮಂಡಳಿಗಳ ವಾರ್ಷಿಕ ಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ನಮ್ಮಲ್ಲಿ ಪ್ರತಿಯೊಂದು ಖಂಡದಿಂದ ಮತ್ತು ಪ್ರತಿಯೊಂದು ಹಂತದ ಆದಾಯದ ಉದಾಹರಣೆಗಳಿವೆ. ನಾನು ಭಾರತವನ್ನು ಪರಿಗಣಿಸಿದಾಗ ಅದು ನಿಜವಾಗಿಯೂ ಸಾಕಷ್ಟು ಪ್ರಭಾವಶಾಲಿಯಾಗಿದೆ ಎಂದು ಅವರು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ