ಮೋಟಾರ್ಸ್‌ ಪ್ಲ್ಯಾಂಟ್‌ ಖರೀದಿಸಲಿದೆ ಮಹೀಂದ್ರಾ

ಶನಿವಾರ, 20 ಆಗಸ್ಟ್ 2022 (13:53 IST)
ಮುಂಬೈ : ಮಹೀಂದ್ರಾ ಕಂಪನಿ ಮಹಾರಾಷ್ಟ್ರದ ತಾಳೆಗಾಂವ್ನಲ್ಲಿರುವ ಅಮೆರಿಕದ ಕಾರು ತಯಾರಕ ಕಂಪನಿ ಜನರಲ್ ಮೋಟಾರ್ಸ್ನ ಉತ್ಪಾದನಾ ಘಟಕವನ್ನು ಖರೀದಿಸುವ ಸಾಧ್ಯತೆಯಿದೆ.
 
ಮಹೀಂದ್ರಾ ಕಂಪನಿಯ ಕಾರ್ಯನಿರ್ವಾಹಕರು ಹಲವು ಬಾರಿ ಆಗಮಿಸಿ ಜನರಲ್ ಮೋಟಾರ್ಸ್ ಘಟಕ ವೀಕ್ಷಣೆ ಮಾಡಿದ್ದಾರೆ.

ಮಹೀಂದ್ರಾ ಅಲ್ಲದೇ ಬ್ರಿಟಿಷ್ ಕಂಪನಿ ಎಂಜಿ ಮೋಟಾರ್ಸ್ ಈ ಘಟಕವನ್ನು ಖರೀದಿಸಲು ಉತ್ಸಾಹ ತೋರಿಸಿದೆ. ಆದರೆ ಎಂಜಿ ಮೋಟಾರ್ಸ್ನಲ್ಲಿ ಚೀನಾ ಹೂಡಿಕೆ ಇದ್ದು, ಪರಿಶೀಲನೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಜನರಲ್ ಮೋಟಾರ್ಸ್ ಮಾತುಕತೆಯಿಂದ ಹಿಂದೆ ಸರಿದಿದೆ ಎಂದು ವರದಿಯಾಗಿದೆ.

ಮಹೀಂದ್ರಾ ಕಂಪನಿಯ ಡೀಲ್ ಯಶಸ್ವಿಯಾದರೆ ಅಮೆರಿಕದ ಅಟೋಮೊಬೈಲ್ ಕಂಪನಿಯ ಘಟಕವನ್ನು ಖರೀದಿಸಿದ ಎರಡನೇ ಸ್ವದೇಶಿ ಕಂಪನಿ ಎಂಬ ಹೆಗ್ಗಳಿಕಗೆ ಮಹೀಂದ್ರಾ ಪಾತ್ರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ