ಫೇಸ್ ಆಪ್ ಮೊಬೈಲ್ ಅಪ್ಲಿಕೇಶನ್ ಬಳಸುವ ಮುನ್ನ ಈ ಬಗ್ಗೆ ಎಚ್ಚರವಿರಲಿ

ಗುರುವಾರ, 18 ಜುಲೈ 2019 (08:58 IST)
ನವದೆಹಲಿ : ನಾವು ಮುದುಕರಾದ ಮೇಲೆ ಹೇಗೆ ಕಾಣಬಹುದು ಎಂಬ ಕುತೂಹಲ ಹಲವಲ್ಲಿರುತ್ತದೆ. ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೇಸ್ ಆಪ್ ಬಂದಿದ್ದು, ಇದು ಈಗ ಬಾರೀ ಸುದ್ದಿಯಾಗಿದೆ.




ಹೌದು. ಫೇಸ್ ಆಪ್ ಮೊಬೈಲ್ ಅಪ್ಲಿಕೇಶನ್ ನಲ್ಲಿ ವಿಭಿನ್ನ ಫಿಲ್ಟರ್‌ ಗಳು ಹಾಗೂ ವೈಶಿಷ್ಟ್ಯಗಳನ್ನು ಬಳಸಿ ವ್ಯಕ್ತಿ ಫೋಟೋವನ್ನು ಎಡಿಟ್ ಮಾಡಲಾಗುವುದು. ಈ ಆ್ಯಪ್ ಬಳಸಿ ನಮ್ಮ ಮುಖವನ್ನು 60 ವರ್ಷಗಳ ಬಳಿಕ ಹೇಗಿರುತ್ತದೆ ಎಂದು ಅಂದಾಜು ಚಿತ್ರವನ್ನು ಪಡೆಯಬಹುದು.


ಆದಕಾರಣ ಸೆಲೆಬ್ರಿಟಿಗಳು ಜತೆಗೆ ಜನ ಸಾಮಾನ್ಯರು ಕೂಡ 60 ವರ್ಷಗಳಾದಾಗ ತಾವು ಹೇಗೆ ಕಾಣಿಸುತ್ತೇವೆ ಎಂಬುದನ್ನು ಫೋಟೋಗಳನ್ನು ಟ್ವಿಟರ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂಗಳಲ್ಲಿ ಪೋಸ್ಟ್ ಮಾಡಿದ್ದು ಇದು ಈಗ ವೈರಲ್ ಆಗುತ್ತಿದೆ.
ಆದರೆ, ಈ ಆ್ಯಪ್ ಬಳಸುವುದಕ್ಕೆ ಮುನ್ನ ಎಚ್ಚರಿಕೆಯಿಂದಿರಿ. ಯಾಕೆಂದರೆ ಇದರ ಸೆಟ್ಟಿಂಗ್ ನಲ್ಲಿ 'Allow FaceApp to Accessʼ ನಲ್ಲಿ ಫೋಟೋ ಸೆಕ್ಷನ್ ಗೆ ನೆವರ್ ಎಂಬ ಆಯ್ಕೆ ಕ್ಲಿಕ್ ಮಾಡಿದ್ದರೂ. ಫೇಸ್ ಆಪ್ ನಲ್ಲಿ ಫೋಟೋಗಳು ಕಾಣಿಸುತ್ತಿವೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ