ಟಿಕ್ ಟಾಕ್ ಮತ್ತು ಹೆಲೋ ಆ್ಯಪ್ ಬ್ಯಾನ್ ಮಾಡುವಂತೆ ಕೇಂದ್ರ ಸರ್ಕಾರದಿಂದ ನೋಟಿಸ್ ಜಾರಿ
ಶನಿವಾರ, 20 ಜುಲೈ 2019 (08:02 IST)
ನವದೆಹಲಿ : ಚೀನಾದ ಜನಪ್ರಿಯ ಆ್ಯಪ್ ಗಳಾದ ಟಿಕ್ ಟಾಕ್ ಮತ್ತು ಹಲೋ ಆ್ಯಪ್ ಗಳನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ.
ಈ ಹಿಂದೆ ದೇಶ ವಿರೋಧಿ ಚಟುವಟಿಕೆಗಳಿಗೆ ಈ ಆ್ಯಪ್ ಗಳು ಬಳಕೆಯಾಗುತ್ತಿದೆ ಎಂಬ ಕಾರಣಕ್ಕೆ ಟಿಕ್ಟಾಕ್ ಮತ್ತು ಹಲೋ ಆ್ಯಪ್ ಸಂಸ್ಥೆಗಳಿಗೆ ಸ್ವದೇಶಿ ಜಾಗರಣ ಮಂಚ್ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಜುಲೈ 22 ರೊಳಗೆ ಬ್ಯಾನ್ ಮಾಡುವಂತೆ ಗಡುವು ನೀಡಿದ್ದು, ಅದರೊಳಗೆ ಪ್ರತಿಕ್ರಿಯೆ ನೀಡದಿದ್ದರೆ ಈ ಆಯಪ್ ಗಳ ಮೇಲೆ ನಿಷೇಧ ಹೇರುವ ಎಚ್ಚರಿಕೆಯನ್ನು ನೀಡಿ ನೋಟೀಸ್ ಜಾರಿ ಮಾಡಿತ್ತು. .
ಇದೀಗ ಕೇಂದ್ರ ಸರ್ಕಾರ ಕೂಡ ನೋಟಿಸ್ ನೀಡಿದ್ದು, ಈ ನೋಟಿಸ್ ನ್ನು ಗಂಭೀರವಾಗಿ ಪರಿಗಣಿಸಿದ ಟಿಕ್ಟಾಕ್ ಮತ್ತು ಹಲೋ ಆ್ಯಪ್ ಸಂಸ್ಥೆ ಕೇಂದ್ರ ಸರ್ಕಾರ ನೀಡಿದ ದೂರಿಗೆ ಸ್ಪಂದಿಸುತ್ತೇವೆ ಎಂದು ತಿಳಿಸಿವೆ. ಕಳೆದ ಎಪ್ರಿಲ್ ತಿಂಗಳಿನಲ್ಲಿ ಟಿಕ್ಟಾಕ್ ಆ್ಯಪ್ ಕುರಿತು ಮದ್ರಾಸ್ ಹೈಕೋರ್ಟ್ ನಿಷೇಧ ಹೇರಿತ್ತು. ಬಳಿಕ ನಿಷೇಧವನ್ನು ಹಿಂಪಡೆದಿತ್ತು.