149 ವರ್ಷಗಳ ಬಳಿಕ ಇಂದು ಪಾರ್ಶ್ವ ಚಂದ್ರಗ್ರಹಣ ಸಂಭವಿಸುತ್ತಿದ್ದು, ಈ ಚಂದ್ರಗ್ರಹಣ ಸೂಪರ್ ಬ್ಲಡ್ ವೂಲ್ಫ್ ಮೂನ್ ಮಾದರಿಯಲ್ಲಿ ಗೋಚರವಾಗಲಿದೆ ತಡರಾತ್ರಿ 1.30ಕ್ಕೆ ಗ್ರಹಣ ಆರಂಭವಾಗಲಿದೆ. 4.30ಕ್ಕೆ ಚಂದ್ರಗ್ರಹಣ ಪೂರ್ಣಗೊಳ್ಳಲಿದೆ. ಭಾರತ ಸೇರಿ ಏಷ್ಯಾ ಖಂಡ, ಯುರೋಪ್, ಆಸ್ಟ್ರೇಲಿಯಾ ದಕ್ಷಿಣ ಅಮೆರಿಕ ಹಾಗೂ ಆಫ್ರಿಕಾ ಖಂಡದಲ್ಲಿ ಚಂದ್ರಗ್ರಹಣ ಕಾಣಿಸಲಿದೆ. ಆದರೆ ಅರುಣಾಚಲ ಪ್ರದೇಶದ ದುರ್ಗಮ ಪ್ರದೇಶಗಳಲ್ಲಿ ಮಾತ್ರ ಚಂದ್ರಗ್ರಹಣ ಕಾಣಿಸುವುದಿಲ್ಲ ಎನ್ನಲಾಗಿದೆ.
ಈ ವರ್ಷ ಜ.20-21ರಂದು ಸೂಪರ್ ಬ್ಲಡ್ ವೂಲ್ಫ್ ಮೂನ್ ಕಾಣಿಸಿತ್ತು. ಇದೀಗ ಈ ವರ್ಷದ ಎರಡನೇ ಚಂದ್ರಗ್ರಹಣ ಇಂದು ಸಂಭವಿಸುತ್ತಿದೆ. ಇದು ಈ ವರ್ಷದ ಕೊನೆಯ ಚಂದ್ರಗ್ರಹಣವಾಗಿದೆ.