ರಸ್ತೆಗಿಳಿದ ಮಾರುತಿ ಸುಜುಕಿ ಇಗ್ನಿಸ್ ಕಾರು

ಶನಿವಾರ, 14 ಜನವರಿ 2017 (09:45 IST)
ದೇಶೀಯ ವಾಹನ ತಯಾರಿ ಸಂಸ್ಥೆ ಮಾರುತಿ ಸುಜುಕಿ ತನ್ನ ವಾಹನ ಶ್ರೇಣಿಯಲ್ಲಿ ಹೊಸ ವಾಹನವನ್ನು ಮಾರುಕಟ್ಟೆಗೆ ರಿಲೀಸ್ ಮಾಡಿದೆ. ಇಗ್ನಿಸ್ ಹೆಸರಿನ ಈ ಕಾರಿನ ಬೆಲೆ ರೂ.4.59 ಲಕ್ಷದಿಂದ ರೂ.7.8 ಲಕ್ಷ (ದೆಹಲಿ ಎಕ್ಸ್‌ಶೋರೂಮ್ ಬೆಲೆ ) ನಡುವೆ ಇದೆ.
 
ಈ ಸಂದರ್ಭದಲ್ಲಿ ಮಾರುತಿ ಸುಜುಕಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆನಿಚ್ಚಿ ಅಕವಾ ಮಾತನಾಡುತ್ತಾ, ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಈ ಹೊಸ ಬದಲಾವಣೆಗಳೊಂದಿಗೆ ವಾಹನ ತರುವುದು ನಮ್ಮ ಗುರಿ. ವೇಗವಾಗಿ ಬದಲಾಗುತ್ತಿರುವ ಅವರ ಪ್ರಾಧಾನ್ಯತೆಗಳು ನಮಗೆ ಗೊತ್ತು ಎಂದಿದ್ದಾರೆ.
 
ಇಗ್ನಿಸ್ ಪೆಟ್ರೋಲ್ ವೇರಿಯಂಟ್ 1.2 ಇಂಜಿನ್ ಇದ್ದು ರೂ.4.59 ಲಕ್ಷಗಳಿಂದ ರೂ.6.69 ಲಕ್ಷಗಳ ನಡುವೆ ಇದೆ. 1.3 ಡೀಸೆಲ್ ಇಂಜಿನ್ ಇರುವ ಕಾರಿನ ಬೆಲೆ ರೂ.6.39 ಲಕ್ಷಗಳಿಂದ ರೂ.7.8 ಲಕ್ಷಗಳ ನಡುವೆ ಇದೆ. ಸಣ್ಣ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ತನ್ನದೇ ಆದಂತಹ ವಿಶೇಷತೆಗಳನ್ನು ಹೊಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ