ಸಾವಿರಪಟ್ಟು ಹೆಚ್ಚಾದ ಮೊಬಿಕ್ವಿಕ್ ರಿಜಿಸ್ಟ್ರೇಷನ್

ಶುಕ್ರವಾರ, 30 ಡಿಸೆಂಬರ್ 2016 (11:29 IST)
ಅಧಿಕ ಮೌಲ್ಯದ ನೋಟು ರದ್ದಾದ ಬಳಿಕ ಹೆಚ್ಚಿನ ಮಂದಿ ನಗದು ರಹಿತ ಸೇವೆಗಳ ಕಡೆಗೆ ಆಸಕ್ತಿ ತೋರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೊಬೈಲ್ ವ್ಯಾಲೆಟ್‌ಗೆ ಭಾರಿ ಬೇಡಿಕೆ ಇದೆ. ಪ್ರಮುಖ ಮೊಬೈಲ್ ವ್ಯಾಲೆಟ್ ಮೊಬಿಕ್ವಿಕ್‌ನಲ್ಲಿ ಹತ್ತು ಲಕ್ಷ ಮಂದಿ ನೋಂದಣಿ ಮಾಡಿಕೊಳ್ಳುವ ಮೂಲಕ ಹೊಸ ಮೈಲಿಗಲ್ಲನ್ನು ಕಂಪನಿ ತಲುಪಿದೆ. 
 
ನೋಟು ಅಪಮೌಲ್ಯದ ಬಳಿಕ ಮೊಬಿಕ್ವಿಕ್‌ನಲ್ಲಿ ನೋಂದಣಿ ಮಾಡಿಕೊಳ್ಳುವವರ ಪ್ರಮಾಣ ಸಾವಿರಪಟ್ಟಾಗಿದೆ ಎಂದು ಪ್ರಕಟಿಸಿದೆ. ನವೆಂಬರ್ 8ರ ಬಳಿಕ ನಗದು ರಹಿತ ವಹಿವಾಟನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೊಬಿಕ್ವಿಕ್ ಮುಂದಡಿ ಇಟ್ಟಿತು. ಮುಖ್ಯವಾಗಿ ಅಮೂಲ್, ಭಾರತ  ಬೀದಿಬದಿ ವ್ಯಾಪಾರಿಗಳ ರಾಷ್ಟ್ರೀಯ ಸಂಘಟನೆ ಸೇರಿದಂತೆ ಕೆಲವರಿಗೆ ಮೊಬಿಕ್ವಿಕ್ ಸೇವೆಗಳನ್ನು ಕಲ್ಪಿಸಿತು.
 
ಈ ಬಗ್ಗೆ ಮಾತನಾಡಿರುವ ಮೊಬಿಕ್ವಿಕ್ ಸಹ ವ್ಯವಸ್ಥಾಪಕ ಉಪಾಸನ ಥಾಕೂ, ವ್ಯಾಲೆಟ್ ಬಳಕೆದಾರರಿಗೆ ಎದುರಾಗುತ್ತಿದ್ದ ಸಮಸ್ಯೆಗಳನ್ನು ಆಗಿದಾಗ್ಗೆ ಪರಿಹರಿಸಿದ್ದೇವೆ. ಇದಿಷ್ಟೇ ಅಲ್ಲದೆ ಭದ್ರತೆ, ಹೊಸ ಆಯ್ಕೆಗಳನ್ನು ಸೇರಿಸಿದೆವು. ಸ್ವಲ್ಪ ಡಾಟಾ ಬಳಸಿಕೊಂಡು ಕೆಲಸ ಮಾಡುವ ಆಪ್ ಇದು ಎಂದಿದ್ದಾರೆ. 
 
ಈಗಾಗಲೆ ಇಂಗ್ಲಿಷ್, ಹಿಂದಿ, ಗುಜರಾತಿ ಭಾಷೆಗಳಲ್ಲಿರುವ ವ್ಯಾಲೆಟ್‌ನ್ನು ಮುಂಬರುವ ದಿನಗಳಲ್ಲಿ 10 ಭಾರತೀಯ ಭಾಷೆಗಳಲ್ಲಿ ತರುವುದಾಗಿ ಯೋಜನೆ ರೂಪಿಸಿದ್ದೇವೆ ಎಂದರು. ನಗದು ರಹಿತ ಅಭಿಯಾನದ ಭಾಗವಾಗಿ ಹಲವಾರು ಪಟ್ಟಣಗಳಲ್ಲಿ ವ್ಯಾಪರಿಗಳಿಗೆ ಶಿಕ್ಷಣ ನೀಡಿದ್ದೇವೆ ಎಂದಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ