ಮುಂಬೈ: ರಿಲಯನ್ಸ್ ಮುಖ್ಯಸ್ಥ, ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ತಮ್ಮ ಪುತ್ರ ಅನಂತ್ ಅಂಬಾನಿ ಮದುವೆ ತಯಾರಿ ನಡೆಸುತ್ತಿದ್ದಾರೆ.
ಹೇಳಿ ಕೇಳಿ ಶ್ರೀಮಂತ ಉದ್ಯಮಿಯ ಮದುವೆ. ಹಾಗಾಗಿ ಮದುವೆಗೆ ಗಣ್ಯಾತಿಗಣ್ಯರು ಬಂದೇ ಬರುತ್ತಾರೆ. ಮದುವೆಗೆ ಬರುವ ಗಣ್ಯ ಅತಿಥಿಗಳಿಗೆ ಉಡುಗೊರೆ ನೀಡಲು ಅಂಬಾನಿ ಕುಟುಂಬ ನಿರ್ಧರಿಸಿದೆ. ಇದಕ್ಕಾಗಿ ಮಹಾಬಲೇಶ್ವರದ ದೃಷ್ಟಿಹೀನರಿಗೆ ಮೇಣದ ಬತ್ತಿ ತಯಾರಿಸುವ ಗುತ್ತಿಗೆ ನೀಡಿದ್ದಾರೆ.
ಕಳೆದ ವರ್ಷ ಜನವರಿಯಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಎಂಗೇಜ್ ಮೆಂಟ್ ನಡೆದಿತ್ತು. ಇದೇ ಮಾರ್ಚ್ 1 ರಿಂದ ಮಾರ್ಚ್ 3 ರವರೆಗೆ ಅಂಬಾನಿ ತವರು ಗುಜರಾತ್ ನ ಜಾಮ್ ನಗರದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್, ಹಾಲಿವುಡ್ ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ. ಮದುವೆಗೆ ಆಗಮಿಸುವ ಗಣ್ಯರಿಗೆ ವಿಶೇಷ ಉಡುಗೊರೆ ನೀಡಲು ಅಂಬಾನಿ ಕುಟುಂಬ ನಿರ್ಧರಿಸಿದೆ.
ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಆಶಯದಂತೆ ಇಲ್ಲಿನ ದೃಷ್ಟಿಹೀನ ಕುಶಲಕರ್ಮಿಗಳು ನಿರ್ಮಿಸಿದ ವಿಶೇಷ ಮೇಣದ ಬತ್ತಿಗಳನ್ನು ಉಡುಗೊರೆಯಾಗಿ ನೀಡಲು ಅಂಬಾನಿ ಕುಟುಂಬ ತೀರ್ಮಾನಿಸಿದೆ. ಈ ಮೂಲಕ ಮೇಕ್ ಇನ್ ಇಂಡಿಯಾಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎನ್ನುವುದು ಅಂಬಾನಿ ಇಂಗಿತ. ನೂರಾರು ಕೋಟಿ ರೂ. ಖರ್ಚು ಮಾಡಿ ಅಂಬಾನಿ ಮಗನ ಮದುವೆ ಮಾಡುತ್ತಿದ್ದಾರೆ. ಈ ಮದುವೆಯಲ್ಲಿ ಬಾಲಿವುಡ್ ಕಲಾವಿದದರಿಂದ ಮನರಂಜನೆ ಕಾರ್ಯಕ್ರಮಗಳೂ ಇರಲಿವೆ.